Mysore
17
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ನರೇಂದ್ರ ಮೋದಿ: ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ

ugrappa speech narrendra modhi

ಮೈಸೂರು: ಈ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಮಂತ್ರಿ ಎಂದರೆ ಅದು ನರೇಂದ್ರ ಮೋದಿ ಮಾತ್ರ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮೈಸೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ದೇಶ ಕಂಡಂತಹ ದುರ್ಬಲ ಪ್ರಧಾನಮಂತ್ರಿ ಅಂದ್ರೆ ಅದು ನರೇಂದ್ರ ಮೋದಿ. ಜನ ವಿರೋಧಿ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದಾರೆ. ಕಳೆದ ಹತ್ತು ಹನ್ನೊಂದು ವರ್ಷಗಳಲ್ಲಿ ಈ ದೇಶದ ಸಾಲ ಸುಮಾರು 175 ಲಕ್ಷ ಕೋಟಿಗೆ ಹೋಗಿದೆ. ನಿಮ್ಮ ಆಡಳಿತ ಅವಧಿಯಲ್ಲಿ ಯಾವ ದೊಡ್ಡ ದೊಡ್ಡ ಯೋಜನೆಗಳನ್ನ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದರು.

ಇನ್ನು ದೇಶದ ಜನರ ಮಧ್ಯೆ ಕಂದಕವನ್ನು ಸೃಷ್ಟಿ ಮಾಡಿ, ಇನ್ನೊಂದು ಕಡೆ ಜನರ ಬದುಕಿನ ಮೇಲೆ ಚಪ್ಪಡಿ ಕಲ್ಲು ಎಳೆಯುವ ಕೆಲಸ ಮಾಡುತ್ತಿದ್ದಾರೆ. ದೇಶದ ಉದ್ದಗಲಕ್ಕೂ ಬೆಲೆ ಏರಿಕೆಯಾಗಿದೆ. ಬಿಜೆಪಿಯವರು ಮೈಸೂರಿನಿಂದ ಜನಾಕ್ರೋಶ ಯಾತ್ರೆ ಮಾಡಿದ್ದಾರೆ. ಜನಾಕ್ರೋಶ ನಿಜವಾಗಿ ಇರೋದು ಕೇಂದ್ರ ಸರ್ಕಾರದ ಮೇಲೆ. ತಾಕತ್ತಿದ್ದರೆ ಬಿಜೆಪಿಯವರು ಸಾರ್ವಜನಿಕ ಚರ್ಚೆಗೆ ಬನ್ನಿ. ಬೆಲೆ ಏರಿಕೆ ಬಗ್ಗೆ ಯಾರು ಕಾರಣ ಎಂದು ಚರ್ಚೆ ಮಾಡೋಣ ಬನ್ನಿ ಎಂದು ಸವಾಲು ಹಾಕಿದರು.

ಇನ್ನು ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಅಗತ್ಯ ವಸ್ತುಗಳ ಮೇಲಿನ ಬೆಲೆ ಕಡಿಮೆ ಇದೆ. ನಮ್ಮ ಸರ್ಕಾರದ ಮೇಲೆ ಆರೋಪ ಮಾಡುವುದಕ್ಕಿಂತ ನಿಮ್ಮ ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಮಾಡಿ. ಗ್ಯಾಸ್ ಮೇಲೆ ದಿಢೀರನೇ 50 ರೂ ಹೆಚ್ಚಳ ಮಾಡಿರುವುದನ್ನು ಈ ಕೂಡಲೇ ವಾಪಸ್ ಪಡೆಯಬೇಕು. ವಿಜಯೇಂದ್ರ ಇನ್ನೂ ಎಳಸು ಇನ್ನೂ ಬಲಿತಿಲ್ಲ.
ನಮ್ಮ ವಿರುದ್ಧ ಜನಾಕ್ರೋಶ ಮಾಡುವ ಬದಲು ಕೇಂದ್ರ ಸರ್ಕಾರದ ವಿರುದ್ಧ ಮಾಡಿ ಮಿಸ್ಟರ್ ಅಶೋಕ್, ಮಿಸ್ಟರ್ ವಿಜಯೇಂದ್ರ ಎಂದು ಏಕವಚನ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಅವರು ಅಂದಾನಿ, ಅದಾನಿಗಳ ಸಾಲ ಮನ್ನಾ ಮಾಡ್ತಾರೆ. ಯಾಕೆ ನಮ್ಮ ರೈತರ ಸಾಲಮನ್ನಾ ಮಾಡ್ತಾ ಇಲ್ಲ ಎಂದು ಪ್ರಶ್ನೆ ಮಾಡಿದರು.

Tags:
error: Content is protected !!