Mysore
20
clear sky

Social Media

ಶನಿವಾರ, 24 ಜನವರಿ 2026
Light
Dark

ಮೈಸೂರು | ಸ್ಚಚ್ಛನಗರಿ ಗರಿಮೆಗೆ ಪಾಲಿಕೆ ಪಣ

ಮೈಸೂರು : ಪ್ರತಿ ವರ್ಷದಂತೆ ಈ ಬಾರಿಯೂ ಸ್ವಚ್ಚ ಸರ್ವೇಕ್ಷಣ್‌ ಸಮೀಕ್ಷೆ ನಡೆಯುತ್ತಿದೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಮೈಸೂರು ಮಹಾನಗರ ಪಾಲಿಕೆಯು ಸ್ವಚ್ಛ ನಗರಗಳಲ್ಲಿ ಟಾಪ್‌ 10ರ ಸ್ಥಾನ ಪಡೆಯಲು ಪಣತೊಟ್ಟಿದೆ.

ಈ ಹಿನ್ನೆಲೆ, ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಮೈಸೂರು ಮಂದಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವ ಮೂಲಕ ಪಾಲಿಕೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಸ್ವಚ್ಛ ಸರ್ವೇಕ್ಷಣ ಈಗಾಗಲೇ ಒಂದು ಭಾಗ ಮುಗಿಸಿ ಎರಡನೇ ಹಂತಕ್ಕೆ ಕಾಲಿಟ್ಟಿದೆ. ನೀರು ಮತ್ತು ಕಸ ವಿಂಗಡಣೆ ವಿಚಾರದಲ್ಲಿ ರೇಟಿಂಗ್ ಪ್ರಕ್ರಿಯೆ ನಡೆಯುತ್ತಿದೆ. 27ನೇ ಸ್ಥಾನಕ್ಕೆ ಕುಸಿತ ಕಂಡಿದ್ದ ಮೈಸೂರ ನಗರವನ್ನ ಟಾಪ್ 10 ರಗೆ ತೆಗೆದುಕೊಂಡು ಹೋಗುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ನಾಗರೀಕರು ಧನಾತ್ಮಕ ಪ್ರತಿಕ್ರಿಯೆ ನೀಡಿ ಸಹಕರಿಸಬೇಕು. ರಸ್ತೆಗಳಲ್ಲಿ ಕಸ ಬೀಸಾಡುವುದನ್ನ ನಿಲ್ಲಿಸಬೇಕು. ಸ್ವಚ್ಛತಾ ಅಭಿಯಾನದಲ್ಲಿ ಸಾರ್ವಜನಿಕರ ಪಾಲ್ಗೊಂಡು ಸಹಕರಿಸಬೇಕು ಎಂದು ಮನವಿ  ಮಾಡಿದ್ದಾರೆ.

ತೆರಿಗೆ ಪಾವತಿಗೆ 5% ವಿನಾಯಿತಿ

ಸಾರ್ವಜನಿಕ ಆಸ್ತಿ ಮೇಲಿನ ತೆರಿಗೆ ಪಾವತಿಗೆ ಪ್ರತಿ ವರ್ಷದಂತೆ ಈ ವರ್ಷವೂ 5% ವಿನಾಯಿತಿ ನೀಡಲಾಗಿದೆ. ಮೈಸೂರಿನ ಜನರು ಈ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳಿ. ಇದರಿಂದ ನಿಮಗೂ ಅನುಕೂಲವಾಗುತ್ತೆ. ಪಾಲಿಕೆಗೂ ಆದಾಯಕ್ಕೂ ಅನುಕೂಲವಾಗುತ್ತದೆ ಎಂದು ಹೇಳಿದರು.

 

Tags:
error: Content is protected !!