Mysore
24
mist

Social Media

ಭಾನುವಾರ, 07 ಡಿಸೆಂಬರ್ 2025
Light
Dark

ನಂಜನಗೂಡಿನಲ್ಲಿ ಜಾತ್ರೆಯ ವೈಭವ ; ಅದ್ದೂರಿಯಾಗಿ ನಡೆದ ಪಂಚ ರಥೋತ್ಸವ

ಮೈಸೂರು : ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಪಂಚ ರಥೋತ್ಸವ ಅದ್ದೂರಿಯಾಗಿ ನಡೆದಿದೆ. ದೊಡ್ಡೆ ಜಾತ್ರೆ ಎಂದೇ ಕರೆಸಿಕೊಳ್ಳುವ ಇಲ್ಲಿನ ರಥೋತ್ಸವಕ್ಕೆ ಸಹಸ್ರಾರು ಮಂದಿ ಸಾಕ್ಷಿಯಾದರು.

ಬುಧವಾರ ಬೆಳಿಗ್ಗೆ 5 ರಿಂದ 5.40 ಶುಭ ಮೀನ ಲಗ್ನದಲ್ಲಿ ರಥೋತ್ಸವ ಜರುಗಿತು.  ಮಧ್ಯರಾತ್ರಿಯಿಂದಲೇ ಜಾತ್ರೋತ್ಸವದ ಪೂಜಾ ಕೈಂಕರ್ಯಗಳು ಆರಂಭವಾಗಿ, ವಿವಿಧ ಹೋಮ, ಹವನಗಳು ನಡೆದವು. ಪಾರ್ವತಿ, ಗಣಪತಿ ಹಾಗೂ ಸುಬ್ರಮಣ್ಯ ಮತ್ತು ಚಂಡಕೇಶ್ವರಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ 6 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವದಲ್ಲಿ ವಿರಾಜಮಾನನಾಗಿದ್ದ ನಂಜನಗೂಡಿನ ಶ್ರೀಕಂಠೇಶ್ವರ ತೇರನ್ನು ದೇವಾಲಯದ ಸತ್ತ ಎಳೆಯಲಾಯಿತು. ವರ್ಷಕೊಮ್ಮೆ ನಡೆಯುವ ನಂಜುಂಡೇಶ್ವರ ರಥೋತ್ಸವವನ್ನು ಕಂಡು ಸಹಸ್ರಾರು ಮಂದಿ ಕಣ್ತುಂಬಿಕೊಂಡರು.

ಜಾತ್ರೆಯಲ್ಲಿ ಹೆಚ್ಚು ಜನ ಸೇರಿದ್ದರಿಂದ ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಶಾಸಕ ದರ್ಶನ್ ಧ್ರುವ ನಾರಾಯಣ್ ಸೇರಿದಂತೆ ಜಿಲ್ಲಾಡಳಿತದ ಪ್ರಮುಖರು ರಥೋತ್ಸವದಲ್ಲಿ ಭಾಗಿಯಾಗಿದ್ದರು.

Tags:
error: Content is protected !!