Mysore
19
clear sky

Social Media

ಗುರುವಾರ, 29 ಜನವರಿ 2026
Light
Dark

IPL2025: ಸೂಪರ್‌ ಜೈಂಟ್ಸ್‌ಗೆ ವಿರೋಚಿತ ಜಯ

ಕೊಲ್ಕತ್ತಾ: ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ವಿರುದ್ದ ನಡೆದ ಐಪಿಎಲ್‌ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ 4 ರನ್‌ಗಳ ವಿರೋಚಿತ ಜಯಗಳಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ.

ಟಾಸ್‌ ಗೆದ್ದ ಕೆಕೆಆರ್‌ ನಾಯಕ ಅಜಿಂಕ್ಯ ರಹಾನೆ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಲೆಕ್ಕಚಾರವನ್ನು ಲಕ್ನೋ ಬ್ಯಾಟರ್‌ಗಳು ಉಲ್ಟಾ ಮಾಡಿದರು. ಕೆಕೆಆರ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 238 ರನ್‌ಗಳ ಬೃಹತ್‌ ಗುರಿ ನೀಡಿದರು. ಈ ಮೊತ್ತ ಬೆನ್ನತ್ತಿದ ಕೊಲ್ಕತ್ತ ತಂಡ ಗೆಲುವಿನ ಸನಿಹದಲ್ಲಿ ಮುಗ್ಗರಿಸಿ 4 ರನ್‌ಗಳ ವಿರೋಚಿತ ಸೋಲು ಅನುಭವಿಸಿದರು.

ಲಕ್ನೋ ಪರ ಮಿಚೆಲ್‌ ಮಾರ್ಷ್‌ 81(48) ಹಾಗೂ ಏಡನ್‌ ಮಾರ್ಕರಮ್‌ 47(28) ಉತ್ತಮ ಆರಂಭ ಒದಗಿಸಿದರು. ಮರ್ಕರಮ್‌ ಔಟಾದ ನಂತರ ಮಾರ್ಷ್‌ ಜೊತೆಗೂಡಿದ ನಿಕೋಲಸ್‌ ಪೂರನ್‌ ಕೋಲ್ಕತ್ತಾ ತಂಡದ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. ಕೇವಲ 36 ಎಸೆತಗಳಲ್ಲಿ 87 ರನ್‌ ಚಚ್ಚಿದರು. ಇವರ ಈ ಇನ್ನಿಂಗ್ಸ್‌ನಲ್ಲಿ 7 ಫೋರ್‌ ಹಾಗೂ 8 ಭರ್ಜರಿ ಸಿಕ್ಸರ್‌ಗಳು ಕಂಡುಬಂದವು.

ಬ್ಯಾಟರ್‌ಗಳ ವೈಫಲ್ಯ: ಬೃಹತ್‌ ಮೊತ್ತ ಬೆನ್ನತ್ತಿದ ಕೆಕೆಆರ್‌ಗೆ ಕ್ವಿಂಟಾನ್‌ ಡಿ ಕಾಕ್‌ 15(9) ಮತ್ತು ಸುನೀಲ್‌ ನರೈನ್‌ 30(13) ಉತ್ತಮ ಆರಂಭ ಒದಗಿಸಿದರು. ಬಳಿಕ ಸ್ಕ್ರೀಸ್‌ಗೆ ಬಂದ ನಾಯಕ ಅಜಿಂಕ್ಯ 61(35) ಜೊತಗೂಡಿದ ವೆಂಕಟೇಶ್‌ ಅಯ್ಯರ್‌ 45(29) ಪಂದ್ಯದ ಗತಿಯನ್ನೆ ಬದಲಾಯಿಸಿದರು. ಆದರೆ, ಏಳು ಓವರೆಗೆ 77 ರನ್‌ಗಳ ಅವಶ್ಯಕತೆ ಇದ್ದಾಗ ಕೋಲ್ಕತ್ತಾ ಬ್ಯಾಟರ್‌ಗಳ ಪೆವಿಲಿಯನ್‌ ಪೆರೇಡ್‌ ನಡೆಯಿತು. ರಮಣದೀಪ್‌ ಸಿಂಗ್‌ 1(2), ರಘುವಂಶಿ 5(4), ಅಂಡ್ರಿ ರಸೆಲ್‌ 7(4) ರನ್‌ಗಳಿಗೆ ಔಟಾದರು.

ಕೊನೆಯಲ್ಲಿ ರಿಂಕು ಸಿಂಗ್‌ 38(15)* ಹಾಗೂ ಹರ್ಷಿತ್‌ ರಾಣಾ 10(9)* ಹೋರಾಟ ನಡೆಸಿದರು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದರು. ಅಂತಿಮವಾಗಿ ಕೊಲ್ಕತ್ತಾ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 234 ರನ್‌ಗಳಿಸಿ ವಿರೋಚಿತ ಸೋಲೊಪ್ಪಿಕೊಂಡಿತು.

ಲಕ್ನೋ ತಂಡದ ಪರ ಆಕಾಶ್‌ ದಿಪ್‌ ಮತ್ತ ಶಾರ್ದೂಲ್‌ ಠಾಕೂರ್‌ ತಲಾ 2 ವಿಕೆಟ್‌ ಪಡೆದರೆ, ಆವಿಶ್‌ ಖಾನ್‌, ದಿಗ್ವೇಶ್‌ ಸಿಂಗ್‌ ಹಾಗೂ ರವಿ ಬಿಷ್ಣೊಯಿ ತಲಾ ಒಂದು ವಿಕೆಟ್‌ ಪಡೆದರು.

Tags:
error: Content is protected !!