Mysore
20
few clouds

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಕೇಂದ್ರ ಸರ್ಕಾರ, ಚೀನಾದಿಂದ ಅತಿಕ್ರಮ ಪ್ರವೇಶ ಮುಚ್ಚಿ ಹಾಕಲು ವಕ್ಫ್‌ ಬಿಲ್‌ ಮಂಡಿಸಿದೆ: ಸಂತೋಷ್‌ ಲಾಡ್‌

ಧಾರವಾಡ: ಕೇಂದ್ರ ಸರ್ಕಾರ, ಭಾರತದೊಳಗೆ ಚೀನಾ ಅತಿಕ್ರಮ ಪ್ರವೇಶ ಮಾಡಿದ್ದು, ಅದನ್ನು ಮುಚ್ಚಿ ಹಾಕಲು ವಕ್ಫ್ ಬಿಲ್‌ ಮಂಡಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ.

ಧಾರವಾಡದಲ್ಲಿ ಇಂದು(ಏಪ್ರಿಲ್‌.7) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಚೀನಾ 600ಕ್ಕೂ ಹೆಚ್ಚು ಹಳ್ಳಿಗಳನ್ನು ಕಬ್ಜಾ ಮಾಡಿದೆ. ಅಲ್ಲದೇ ಚೀನಾ ನಮ್ಮ ದೇಶದ 176 ಕಿ.ಮೀ ಅತಿಕ್ರಮ ಪ್ರವೇಶಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ಅದನ್ನು ಮುಚ್ಚಿ ಹಾಕಲು ‘ವಕ್ಫ್’ ಬಿಲ್ ಮಂಡಿಸುವ ನಾಟಕ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಚೀನಾದವರು ಎರಡು ಪೋಸ್ಟ್ ಕ್ರಿಯೇಟ್ ಮಾಡಿದ್ದಾರೆ. ಈ ಕಾರಣಕ್ಕೆ ಈ ವಿಚಾರ ಎಲ್ಲೂ ಚರ್ಚೆಗೆ ಬರಬಾರದೆಂದು ವಕ್ಫ್ ಬಿಲ್ ತಂದಿದ್ದಾರೆ. ಇನ್ನೂ ಬಡತನ, ನಿರುದ್ಯೋಗದ ಬಗ್ಗೆ ಚರ್ಚೆ ಆಗಬಾರದೆಂಬ ಉದ್ದೇಶದಿಂದ ಬಿಜೆಪಿಯವರು ಬಿಲ್‌ ಮಂಡಿಸಿದ್ದಾರೆ. ಆದರೆ ನಾಳೆ ಇದು ಕೋರ್ಟ್‌ನಲ್ಲಿ ಬೀಳುತ್ತದೆಂದು ತಿಳಿದಿದ್ದರೂ ವಕ್ಫ್ ಬಿಲ್ ಅಂಗೀಕರಿಸಿದ್ದಾರೆ ಎಂದು ಹರಿಹಾಯ್ದರು.

Tags:
error: Content is protected !!