Mysore
14
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಶಾಸಕ ಶ್ರೀವತ್ಸ ಅಸಮಾಧಾನ: ಕಾರಣ ಇಷ್ಟೇ

ಪ್ರಶಾಂತ್‌ ಎನ್‌ ಮಲ್ಲಿಕ್‌

ಮೈಸೂರು: ಕ್ಯಾತಮಾರನಹಳ್ಳಿ ವಿವಾದಿತ ಸ್ಥಳದಲ್ಲಿ ಅರೇಬಿಕ್‌ ಶಾಲೆ ತೆರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಟಿ.ಎಸ್.ಶ್ರೀವತ್ಸ ಪ್ರತಿಕ್ರಿಯೆ ನೀಡಿದ್ದು, ಜಿಲ್ಲಾಧಿಕಾರಿಗಳು ಒತ್ತಡಕ್ಕೆ ಮಣಿದು ಆದೇಶ ಹೊರಡಿಸಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಶ್ರೀವತ್ಸ ಅವರು, ದೊಡ್ಡವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎನ್ನುವ ಹಾಗೆ ಕಾಣಿಸುತ್ತಿದೆ. ಪೊಲೀಸರು ಇದನ್ನು ಸೂಕ್ಷ್ಮ ಸ್ಥಳವಾಗಿದ್ದು, ಯಥಾ ಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ವರದಿ ನೀಡಿದ್ದಾರೆ. ಆದರೂ ಜಿಲ್ಲಾಧಿಕಾರಿ ಅವರು ಗ್ರಾಮಸ್ಥರ ಅಭಿಪ್ರಾಯಕ್ಕೆ ಮಣಿಯದೇ ಆದೇಶ ಹೊರಡಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯ ಹೋರಾಟ ಮುಂದುವರಿಯುತ್ತದೆ. ಗ್ರಾಮಸ್ಥರ ಪರವಾಗಿ ನಾವೆಲ್ಲಾ ಇದ್ದೇವೆ. ಕ್ಯಾತಮಾರನಹಳ್ಳಿ ಒಂದು ಸೂಕ್ಷ್ಮ ಪ್ರದೇಶ. ಈ ಜಾಗಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ಹೋಗಿದ್ದಾರೆ. ವಿಚಾರ ಇಷ್ಟೆಲ್ಲಾ ಸೂಕ್ಷ್ಮವಾಗಿದ್ದರೂ ಜಿಲ್ಲಾಧಿಕಾರಿ ಅವರು ಆದೇಶ ನೀಡಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

Tags:
error: Content is protected !!