Mysore
25
overcast clouds

Social Media

ಮಂಗಳವಾರ, 21 ಜುಲೈ 2026
Light
Dark

ರಾಮನವಮಿ | ಅಯೋಧ್ಯ ಬಾಲರಾಮನಿಗೆ ʻಸೂರ್ಯ ತಿಲಕʼ

ಅಯೋಧ್ಯಾ : ಇಲ್ಲಿನ ರಾಮಮಂದಿರದಲ್ಲಿ ರಾಮನವಮಿ ಸಂಭ್ರಮ ಮನೆ ಮಾಡಿದೆ. ಬಾಲರಾಮನ ಹಣೆಯ ಮೇಲೆ ಸೂರ್ಯ ತಿಲಕ ಮೂಡಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಸೂರ್ಯನ ಕಿರಣಗಳು ಬಾಲರಾಮನ ಮೂರ್ತಿಯ ಹಣೆಯನ್ನು ಸ್ಪರ್ಶಿಸುತ್ತಿದ್ದಂತೆ, ಮಂದಿರದಲ್ಲಿ ಜೈಕಾರ ಮೊಳಗಿದವು.

ಅಯೋಧ್ಯ ರಾಮ ಮಂದಿರದಲ್ಲಿ ಪ್ರತಿ ರಾಮನವಮಿ ದಿನದಂದು ರಾಮನ ಮೂರ್ತಿಗೆ ಸೂರ್ಯ ತಿಲಕ ಇಡುವ ತಂತ್ರಜ್ಞಾನವ್ನು ಸಿಎಸ್‌ಐಆರ್‌ ಹಾಗೂ ಕೇಂದ್ರಿಯ ಕಟ್ಟಡ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿ ಅಳವಡಿಸಿದೆ.

ರಾಮ ಮಂದಿರದ ಮೂರನೇ ಮಹಡಿಯಲ್ಲಿ ಆಪ್ಟಿಕಲ್‌ ಲೆನ್ಸ್‌ವೊಂದು ಇದೆ. ಅದು ಪೈಪ್‌ಗಳಲ್ಲಿ ಅಳವಡಿಸಿರುವ ರಿಫ್ಲೆಕ್ಟರ್‌ಗಳ ಮೂಲಕ ಬೆಳಕನ್ನು ವಿಗ್ರಹದ ಹಣೆಯ ಮೆಲೆ ಮೂಡಿಸಲಿದೆ. ರಾಮನವಮಿ ದಿನದಂದು ಮಧ್ಯಾಹ್ನ 12ರಿಂದ ಸುಮಾರು 6 ನಿಮಿಷಗಳ ಕಾಲ ಸೂರ್ಯನ ಬೆಳಕು ಗರ್ಭಗುಡಿಯ ವಿಗ್ರಹದ ಹಣೆಯ ಮೇಲೆ ಬೀಳಲಿದೆ ಎಂದು ವಿಜ್ಞಾನಿ ಆರ್.ಧರ್ಮರಾಜು ತಿಳಿಸಿದರು.

Tags:
error: Content is protected !!