Mysore
14
overcast clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಮೈಸೂರು | ಕಾದ ಭೂಮಿಯ ತಣಿಸಿದ ವರ್ಷದ ಮೊದಲ ಮಳೆ

ಮೈಸೂರು: ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ(ಏ.2) ರಾತ್ರಿ ವರ್ಷದ ಮೊದಲ ಮಳೆ ಸುರಿದಿದೆ. ಬಿಸಿಲಿನ ಜಳಕ್ಕೆ ಬಸವಳಿದಿದ್ದ ಜನರಿಗೆ ಮಳೆರಾಯ ಸದ್ಯ ತಂಪೆರೆದಿದ್ದಾನೆ.

ರಾತ್ರಿ 8 ಗಂಟೆಯ ಹೊತ್ತಿಗೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿಯಿತು. ಅಲ್ಲದೆ, ಇನ್ನೂ ಉಳಿದ ತಾಲ್ಲೂಕಿನ ಹಲವು ಕಡೆಗಳಲ್ಲಿ ಗುಡುಗು ಸಹಿತ ಮೋಡ ಕವಿದ ವಾತಾವರಣದಿಂದ ಮಳೆ ಆಗಿದೆ.

ಮಳೆಯ ಮುನ್ಸೂಚನೆ ಇಲ್ಲದೆ ಮನೆಗೆ ತೆರಳುತ್ತಿದ್ದ ಸಾರ್ವಜನಿಕರು ಮಳೆಯಿಂದಾಗಿ ಅಂಗಡಿ-ಮುಗ್ಗಟ್ಟುಗಳ ಬಳಿ ಆಶ್ರಯ ಪಡೆದರು. ಇನ್ನೂ ಬೈಕ್‌ ಸವಾರರಿಗೆ ಸಂಚಾರದ ಸಮಸ್ಯೆಯೂ ಉಂಟಾಯಿತು.

ಮುಂದಿನ ನಾಲ್ಕೈದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ವರ್ಷದ ಮೊದಲ ಮಳೆಯಿಂದಾಗಿ ಮೈಸೂರು ಸದ್ಯ ತಂಪಾಗಿದೆ. ವರ್ಷದ ಮೊದಲ ಮಳೆ ಕಂಡು ಜನರಲ್ಲಿ ಸಂತಸ ಮೂಡಿದೆ.

ನಗರದ ಡಿ.ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಧನ್ವಂತ್ರಿ ರಸ್ತೆ, ಅಶೋಕ ರಸ್ತೆ, ನಾರಾಯಣ ಶಾಸಿ ರಸ್ತೆ, ಚಾಮರಾಜ ಜೋಡಿರಸ್ತೆ, ಅಗ್ರಹಾರ, ಇರ್ವಿನ್ ರಸ್ತೆ, ಗಾಂಧಿನಗರ, ಉದಯಗಿರಿ, ಗಂಗೋತ್ರಿ ಬಡವಣೆ ಮೊದಲಾದ ಕಡೆಗಳಲ್ಲಿ ಮಳೆ ಜೋರು ಸುರಿಯಿತು. ಈ ವೇಳೆ ಜನರು ಅಲ್ಲಲ್ಲಿ ನಿಂತು ಆಶ್ರಯ ಪಡೆದರೆ, ಹೊರಗಿನವರು ನಗರ ಮತ್ತು ಸಬ್ ಅರ್ಬನ್ ಬಸ್ ನಿಲ್ದಾಣಕ್ಕೆ ಮಳೆಯಲ್ಲೇ ನೆನೆದು ಬಸ್‌ಗಳನ್ನು ಹತ್ತಿ ಹೊರಟರು.

Tags:
error: Content is protected !!