Mysore
21
clear sky

Social Media

ಗುರುವಾರ, 19 ಫೆಬ್ರವರಿ 2026
Light
Dark

ದರ್ಶನ್‌ ಜಾಮೀನು ರದ್ದು ಕೋರಿ ಅರ್ಜಿ : ಏ.22ಕ್ಕೆ ವಿಚಾರಣೆ

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಈಗಾಗಲೇ ಜಾಮೀನು ದೊರೆತಿದೆ. ಇದೀಗ ರಾಜ್ಯ ಪೊಲೀಸ್‌ ಇಲಾಖೆ ಪ್ರಕರಣದ ಕೆಲ ಆರೋಪಿಗಳ ಜಾಮೀನು ರದ್ದು ಮಾಡಬೇಕೆಂದು ಕೋರಿ ಸುಪ್ರೀಂಕೊರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಪ್ರಕರಣ ವಿಚಾರಣೆ ಇಂದು(ಏ.2) ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು. ರಾಜ್ಯ ಪೊಲೀಸ್‌ ಇಲಾಖೆ ಪರವಾಗಿ ಅರ್ಜಿ ಉಲ್ಲೇಖ ಮಾಡಿ ವಕೀಲ ಸಿದ್ದಾರ್ಥ್‌, ಜಾಮೀನು ರದ್ದತಿಗೆ ಮನವಿ ಮಾಡಿದರು. ಬಳಿಕ ನ್ಯಾಯಮೂರ್ತಿಗಳು ವಿಚಾರಣೆಯನ್ನು ಏಪ್ರಿಲ್‌ 22ಕ್ಕೆ ಮುಂದೂಡಿದರು.

ಏ.22 ರಂದು ನಡೆಯಲಿರುವ ವಿಚಾರಣೆಗೆ ದರ್ಶನ್‌ ಪರ ವಕೀಲ ನಾಗೇಶ್‌ ಅವರು ವಕಾಲತ್ತು ವಹಿಸುವ ಸಾಧ್ಯತೆಯಿದೆ.

 

 

Tags:
error: Content is protected !!