Mysore
24
clear sky

Social Media

ಮಂಗಳವಾರ, 01 ಸೆಪ್ಟೆಂಬರ್ 2026
Light
Dark

KSRTC ಬಸ್‌ ಚಕ್ರ ಹರಿದು ಸೈಕಲ್‌ ಸವಾರ ಸ್ಥಳದಲ್ಲೇ ಸಾವು

ಮೈಸೂರು: ಜಿಲ್ಲೆಯ ಕೆ.ಆರ್‌.ನಗರ ತಾಲ್ಲೂಕಿನ ಹಂಪಾಪುರ ಬಸ್‌ ನಿಲ್ದಾಣದ ಬಳಿ ಕೆಎಸ್‌ಆರ್‌ಟಿಸಿ ಬಸ್‌, ಸೈಕಲ್‌ ಸವಾರನಿಗೆ ಡಿಕ್ಕಿ ಹೊಡೆದು ಆ ಸೈಕಲ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೆಎಸ್‌ಆರ್‌ಟಿಸಿ ಬಸ್‌ ಓವರ್ ಟೇಕ್ ಮಾಡುವ ಬರದಲ್ಲಿ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಬಸ್‌ ಡಿಕ್ಕಿ ಹೊಡೆದ ರಭಸಕ್ಕೆ ಸೈಕಲ್‌ ಸವಾರ ಬಸ್‌ನ ಮುಂಭಾಗದ ಚಕ್ರದಡಿ ಸಿಲುಕಿ ಸಾವ್ನಪ್ಪಿದ್ದಾನೆ. ಈ ಘಟನೆಯನ್ನು ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಕುಟುಂಸ್ಥ ಆಕ್ರಂದನ ಮುಗಿಲು ಮುಟ್ಟಿದೆ.

ಈ ಅಪಘಾತದಲ್ಲಿ ಹಂಪಾಪುರದ ಚೆಂದೊಡ್ ಶೆಟ್ಟಿ ಎಂದು ಗುರುತಿಸಲಾಗಿದೆ. ಮೃತ ದುರ್ದೈವಿ ಚೆಂದೊಡ್ ಶೆಟ್ಟಿ ಅವರು ಹಂಪಾಪುರ ಗ್ರಾಮದಲ್ಲಿ ಅರ್ಚಕರಾಗಿದ್ದರೆಂದು ಹೇಳಲಾಗಿದೆ.

ಇನ್ನು ಕೆಎಸ್‌ಆರ್‌ಟಿಸಿಯ ಬಸ್‌ ಅನ್ನು ಅಪಘಾತದ ಸ್ಥಳದಲ್ಲೇ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಬಿಟ್ಟು ಪರಾರಿಯಾಗಿದ್ದು, ಇಲ್ಲಿನ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

 

Tags:
error: Content is protected !!