Mysore
17
clear sky

Social Media

ಗುರುವಾರ, 05 ಫೆಬ್ರವರಿ 2026
Light
Dark

ರಾಜ್ಯದಲ್ಲಿ ಡೀಸೆಲ್‌ ದರ 2 ರೂ. ಏರಿಕೆ

ಬೆಂಗಳೂರು: ಹಾಲು, ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ಈಗ ಡೀಸೆಲ್‌ ದರ 2 ರೂ. ಏರಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಏಪ್ರಿಲ್‌ 1ರ ರಾತ್ರಿಯಿಂದ ರಾಜ್ಯಾದ್ಯಾಂತ ಅನ್ವಯವಾಗುವಂತೆ ಪರಿಷ್ಕೃತ ದರ ಜಾರಿಯಾಗಲಿದೆ.

ರಾಜ್ಯ ಸರ್ಕಾರವು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇ18.44 ರಿಂದ 21.77 ರಷ್ಟಕ್ಕೆ ಏರಿಕೆ ಮಾಡಿ ಆದೇಶಿಸಲಾಗಿದೆ. ಬೆಂಗಳೂರಿನಲ್ಲಿ 89.02ರಷ್ಟು ಇದ್ದ ಡೀಸೆಲ್‌ ಬೆಲೆ 91.02ರಷ್ಟಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಈಗಿರುವ ದರಕ್ಕೆ ಅನುಗುಣವಾಗಿ ಶೇ. 3.33ರಷ್ಟು ಹೆಚ್ಚಾಗಲಿದೆ.

ದರ ಏರಿಕೆಯ ನಂತರ ಮಾರಾಟ ಬೆಲೆ ಹೆಚ್ಚಳವಾದರೂ ನೆರೆಯ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ಡೀಸೆಲ್‌ ಬೆಲೆ ಕಡಿಮೆ ಇರಲಿದೆ ಎಂದು ಸರ್ಕಾರ ತಿಳಿಸಿದೆ.

Tags:
error: Content is protected !!