ದಕ್ಷಿಣ ಕನ್ನಡ/ಉಳ್ಳಾಲ: ಈದ್-ಮಿಲಾದ್ ಹಬ್ಬವೂ ಮುಸ್ಲಿಂ ಸಮುದಾಯದಲ್ಲಿ ಸೌಹಾರ್ದತೆಯನ್ನು ಬೆಳೆಸುವ ಗುರಿಯನ್ನು ಹೊಂದಿರುವ ಹಬ್ಬವಾಗಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
ಉಳ್ಳಾಲದ ದರ್ಗಾಕ್ಕೆ ಇಂದು(ಮಾರ್ಚ್.31) ಈದ್ ಹಬ್ಬದ ಪ್ರಯುಕ್ತ ಝಿಯಾರತ್ ಮಾಡಿದ ನಂತರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಂ ಭಾಂದವರು ಒಂದು ತಿಂಗಳ ಕಾಲ ಉಪವಾಸ ಮುಗಿಸಿ ಈದ್ ಉಲ್ ಫಿತ್ರ್ ಹಬ್ಬವನ್ನು ಆಚರಿಸುತ್ತಾರೆ. ಆದರೆ ಈ ಹಬ್ಬದ ಮುಖ್ಯ ಉದ್ದೇಶವೆನೆಂದರೆ ಶಾಂತಿ ಸೌಹಾರ್ದತೆಯನ್ನು ಬೆಳೆಸುವುದಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಳ್ಳಾಲ ದರ್ಗಾದ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ, ದೇಶದ ಎಲ್ಲಾ ಧರ್ಮಗಳಲ್ಲೂ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಮುಸಲ್ಮಾನ ಧರ್ಮದವರು ಕಡ್ಡಾಯ ಕರ್ಮವಾಗಿ ಒಂದು ತಿಂಗಳು ಉಪವಾಸ ಮುಗಿಸಿ ಈದ್ ಉಲ್ ಫಿತ್ರ್ ಹಬ್ಬವನ್ನು ಆಚರಿಸಲಾಗುತ್ತದೆ ಎಂದರು.





