Mysore
21
mist

Social Media

ಗುರುವಾರ, 11 ಡಿಸೆಂಬರ್ 2025
Light
Dark

ಕೆಲ ಮಾಧ್ಯಮಗಳು ವಿಜಯೇಂದ್ರ ಪರ: ಶಾಸಕ ಯತ್ನಾಳ್‌ ಆಕ್ರೋಶ

ಕೊಪ್ಪಳ: ವಿಜಯೇಂದ್ರ ಅವರು ವಾಟ್ಸ್‌ಆಪ್‌ನಲ್ಲಿ ಕಳುಹಿಸುವ ಪ್ರಶ್ನೆಗಳನ್ನು ಕೇಳಲು ಇಲ್ಲಿಗೆ ಬಂದಿದ್ದೀರಾ ಎಂದು ಮಾಧ್ಯಮಗಳನ್ನು ಪ್ರಶ್ನಿಸುವ ಮೂಲಕ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ಬೆಂಬಲವಾಗಿ ನಿಂತಿರುವ ಕೆಲ ಮಾಧ್ಯಮಗಳ ವಿರುದ್ಧ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹರಿಹಾಯ್ದಿದ್ದಾರೆ.

ಇಂದು ಇಲ್ಲಿನ ಗವಿಸಿದ್ದೇಶ್ವರ ಮಠಕ್ಕೆ ಯತ್ನಾಳ್‌ ಅವರು ಭೇಟಿ ನೀಡಿದ ವೇಳೆ ಕೆಲ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ಕರ್ನಾಟಕದ ಎಲ್ಲ ಮಾಧ್ಯಮಗಳು ನಿಷ್ಪಕ್ಷವಾಗಿದ್ದರೆ ಮಾತ್ರ ನನ್ನ ಬಳಿ ಬನ್ನಿ. ನೀವು ಯಡಿಯೂರಪ್ಪ ಹಾಗೂ ವಿಜಯೇಂದ್ರ ಬೆಂಬಲಿಗರಾದರೆ ಬರಬೇಡಿ. ಕೆಲವು ಮಾಧ್ಯಮಗಳು ತಮ್ಮಿಂದಲೇ ರಾಜ್ಯದ ಜನರ ಅಭಿಪ್ರಾಯ ರೂಪುಗೊಳ್ಳುತ್ತವೆ ಎಂದು ಭಾವಿಸಿರುವುದು ಮೂರ್ಖತನ ಎಂದು ಆಕ್ರೋಶಗೊಂಡರು.

ಕಾಂಗ್ರೆಸ್‌ ಪಕ್ಷಕ್ಕೆ ಹೋಗುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ, ಕಾಂಗ್ರೆಸ್‌ ಮುಸ್ಲಿಂ ಪಕ್ಷ. ಈ ಜನ್ಮದಲ್ಲಿ ಅಲ್ಲ, ಮುಂದಿನ ಜನ್ಮದಲ್ಲಿಯೂ ಹೋಗುವುದಿಲ್ಲ ಎಂದರು.

ನಿಮ್ಮ ಜೊತೆಯಲ್ಲಿ ರಮೇಶ್‌ ಜಾರಕಿಹೊಳಿ ಹಾಗೂ ಕುಮಾರ ಬಂಗಾರಪ್ಪ ಈಗಲೂ ಇದ್ದಾರೆಯೇ ಎಂಬ ಪ್ರಶ್ನೆಗೆ, ಅವರು ಯಾವಾಗಲೂ ನನ್ನ ಜೊತೆಗೆ ಇರುತ್ತಾರೆ. ನೀವು ವಿಜಯೇಂದ್ರ ಅವರ ಏಜೆಂಟರ ರೀತಿ ಪ್ರಶ್ನೆ ಕೇಳುವುದಾದರೆ ಇಲ್ಲಿಂದ ಗೆಟ್‌ಔಟ್‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:
error: Content is protected !!