Mysore
29
scattered clouds

Social Media

ಮಂಗಳವಾರ, 28 ಏಪ್ರಿಲ 2026
Light
Dark

ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೌರವಕ್ಕೆ ಭಾಜನರಾದ ಡಾ.ಸರಸ್ವತಿ ಚಂದ್ರಶೇಖರ್‌

ನಂಜನಗೂಡು: ಏಷ್ಯಾ ಇಂಟರ್‌ ನ್ಯಾಷನಲ್‌ ಕಲ್ಚರ್‌ ರಿಸರ್ಚ್‌ ಆಕಾಡೆಮಿಯಿಂದ ನೀಡುವ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೌರವ ವೃತ್ತಿಪರ ಕೌಶಲ್ಯ ಪ್ರಶಸ್ತಿಗೆ ನಂಜನಗೂಡಿನ ನಿವಾಸಿ ಡಾ.ಸರಸ್ವತಿ ಚಂದ್ರಶೇಖರ್ ಅವರು ಪಾತ್ರರಾಗಿದ್ದಾರೆ.

ತಮಿಳುನಾಡಿನ ಹೊಸೂರು ಪಟ್ಟಣದ ಖಾಸಗಿ ಹೋಟೆಲ್‌ ವೊಂದರಲ್ಲಿ ಅಂತರಾಷ್ಟ್ರೀಯ ಸಾಧನೆಯ ಪ್ರಶಸ್ತಿಗಳು, ಏಷ್ಯಾ ಇಂಟರ್‌ ನ್ಯಾಷನಲ್ ಕಲ್ಚರ್ ರಿಸರ್ಚ್ ಅಕಾಡೆಮಿ ವತಿಯಿಂದ ನೀಡುವ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೌರವ ವೃತ್ತಿಪರ ಕೌಶಲ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ನಂಜನಗೂಡಿನಲ್ಲಿ ಆಟೋ ಅಮ್ಮ ಎಂದೇ ಖ್ಯಾತಿ ಪಡೆದಿರುವ ಡಾ.ಸರಸ್ವತಿ ಚಂದ್ರಶೇಖರ್ ರವರ 15 ವರ್ಷಗಳ ಸಾಮಾಜಿಕ ಸೇವೆ ಗುರುತಿಸಿ ಮೈಸೂರು, ಕರ್ನಾಟಕ, ಇಂಡಿಯಾ ರಿಯಾಲಿಟಿ ಇಂಟರ್‌ ನ್ಯಾಷನಲ್ ಸ್ಪೋರ್ಟ್ಸ್ ಅಕಾಡೆಮಿ ವಿಶ್ವ ದಾಖಲೆ ಮಾರ್ಗಸೂಚಿಗಳ ಪ್ರಕಾರ ಮೌಲ್ಯಮಾಪನ ಮಾಡಿ, ಸಮಾಜ ಸೇವೆಯಲ್ಲಿ ತೊಡಗಿರುವ ಡಾ. ಸರಸ್ವತಿ ಚಂದ್ರಶೇಖರ್ ರವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಚೇರ್ಮನ್ ಡಾ. ರಾಬರ್ಟ್ ರೋಮ್ಯಾನುಯೆಲ್ ಹೇರ್‌ಮ್ಯಾನ್, ಆಕಾಡೆಮಿಯ ಅಧ್ಯಕ್ಷ ಡಾ.ಎ.ಪಿ.ಶ್ರೀನಾಥ್, ಇಂಟರ್ ನ್ಯಾಷನಲ್ ತಾಂತ್ರಿಕ ಅಧಿಕಾರಿ ಶ್ರೀ.ಅನಾಥನ್ ಕುಪುಸಾಮಿ, ನಿರ್ದೇಶಕ
ಡಾ.ಆರ್.ಸೆಲ್ವಂ, ಉಪಾಧ್ಯಕ್ಷ ಅರ್ಜುನ್ ಸೇರಿದಂತೆ ಹಲವರು ಹಾಜರಿದ್ದರು.

Tags:
error: Content is protected !!