Mysore
15
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಓದುಗರ ಪತ್ರ: ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ ಸ್ವಾಗತಾರ್ಹ

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆತ್ತ ತಂದೆ-ತಾಯಿಯನ್ನು ವಯಸ್ಸಾದ ಬಳಿಕ ಸರಿಯಾಗಿ ನೋಡಿಕೊಳ್ಳದೆ, ಅವರನ್ನು ಮನೆಯಿಂದ ಹೊರಹಾಕುವುದು, ವೃದ್ಧಾಶ್ರಮಕ್ಕೆ ಸೇರಿಸುವುದು, ಮನೆಯಲ್ಲಿದ್ದರೂ ಸರಿಯಾಗಿ ಆರೈಕೆ ಮಾಡದಿರುವುದನ್ನು ನಾವು ಗಮನಿಸಿದ್ದೇವೆ. ಇಂತಹ ತೊಂದರೆಗಳಿಂದ ಹಿರಿಯರು ಮುಕ್ತವಾಗಲು ಕೇಂದ್ರ ಸರ್ಕಾರವು ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಾಯ್ದೆಯನ್ನು ಜಾರಿಗೆ ತಂದಿರುವುದಾಗಿ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಪರಿಷತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆಯು ಹಿರಿಯ ಜೀವಗಳಿಗೆ ನೆಮ್ಮದಿ ನೀಡಿದೆ ಎಂದರೆ ತಪ್ಪಾಗಲಾರದು. ಎಷ್ಟೋ ಮಕ್ಕಳು ಹೆತ್ತವರಿಂದ ಆಸ್ತಿಯನ್ನು ಬರೆಸಿಕೊಂಡ ನಂತರ ಅವರನ್ನು ಮನೆಯಿಂದ ಹೊರ ಹಾಕಿದ್ದಾರೆ. ಅವರನ್ನು ಸರಿಯಾಗಿ ಆರೈಕೆ ಮಾಡದೆ ನಿರ್ಲಕ್ಷ ತೋರಿದ್ದಾರೆ.

ಇನ್ನು ಕೆಲವರು ವೃದ್ಧಾಶ್ರಮಕ್ಕೆ ಬಿಡುತ್ತಿದ್ದಾರೆ. ಸದ್ಯ ಈ ಕಾಯ್ದೆಯು ನಿರ್ಲಕ್ಷಕ್ಕೆ ಒಳಗಾದ ಹಿರಿಯ ನಾಗರಿಕರಿಗೆ ಆಸರೆಯಾಗಿದ್ದು, ಆಸ್ತಿ ಪಡೆದ ಬಳಿಕ ಮಕ್ಕಳು ಹಿರಿಯರನ್ನು ಹಾರೈಕೆ ಮಾಡದಿದ್ದರೆ, ಹಿರಿಯರಿಂದ ಬರೆಸಿಕೊಂಡ ಆಸ್ತಿ ಪತ್ರಗಳನ್ನು ಅನೂರ್ಜಿತಗೊಳಿಸಿ ಮತ್ತೆ ಹಿರಿಯ ನಾಗರಿಕರ ಹೆಸರಿಗೇ ವರ್ಗಾಯಿಸಲು ಕಾನೂನಿನಲ್ಲಿ ಅವಕಾಶವಿರುವುದು ಒಳ್ಳೆಯದು. ಆದರೆ ಇಂತಹ ಕಾಯ್ದೆಯ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಸರ್ಕಾರ ಜಾಹೀರಾತುಗಳ ಮೂಲಕ ಈ ಕಾಯ್ದೆ ಬಗ್ಗೆ ಪ್ರಚಾರ ಮಾಡಬೇಕು. ಆ ಮೂಲಕ ಹಿರಿಯ ನಾಗರಿಕರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಇದರಿಂದ ಎಷ್ಟೂ ಮಕ್ಕಳು ಹೆತ್ತವರನ್ನು ನಿರ್ಲಕ್ಷಿಸುವುದು ತಪ್ಪುತ್ತದೆ.

-ಸಿದ್ದಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ.

 

Tags:
error: Content is protected !!