Mysore
21
broken clouds

Social Media

ಗುರುವಾರ, 01 ಜನವರಿ 2026
Light
Dark

ಹನಿಟ್ರ್ಯಾಪ್‌ ಪ್ರಕರಣ : ಪಿಐಎಲ್‌ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ಕರ್ನಾಟಕದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಒಟ್ಟು 48 ಮಂದಿ ಮೇಲೆ ನಡೆದಿದೆ ಎನ್ನಲಾದ ಹನಿಟ್ರ್ಯಾಪ್‌ ಪ್ರಕರಣವನ್ನು ಸಿಬಿಐ ಇಲ್ಲವೇ ನ್ಯಾಯಾಂಗದ ತನಿಖೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಇದೇ ವೇಳೆ ಅರ್ಜಿದಾರರ ವಿರುದ್ಧವೂ ಕೆಂಡ ಕಾರಿರುವ ನ್ಯಾಯಾಲಯ ನಿಮಗೆ ಮಾಡಲು ಕೆಲಸವಿಲ್ಲ ಎಂದರೆ ನಮ್ಮ ಅಮೂಲ್ಯವಾದ ಸಮಯವನ್ನು ಏಕೆ ವ್ಯರ್ಥ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದೆ.

ಮಾಧ್ಯಮಗಳ ವರದಿ ಆಧರಿಸಿ ಜಾರ್ಖಂಡ್ ಮೂಲದ ನಿವಾಸಿ ವಿನಯಕುಮಾರ್ ಸಿಂಗ್ ಪರವಾಗಿ ವಕೀಲ ವಿನಯ್‍ಕುಮಾರ್ ಅವರು ಸುಪ್ರೀಂಕೋರ್ಟ್‍ನಲ್ಲಿ ಪಿಐಎಲ್ ಸಲ್ಲಿಕೆ ಮಾಡಿದ್ದರು.

ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು ಪಿಐಎಲ್‍ಅನ್ನು ವಜಾಗೊಳಿಸಿ ಅರ್ಜಿದಾರರನ್ನು ಕಠಿಣ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡರು.

ಅರ್ಜಿದಾರರು ಮೂಲತಃ ಜಾರ್ಖಂಡ್‍ನವರು. ನಿಮಗೂ ಈ ಪ್ರಕರಣಕ್ಕೂ ಏನು ಸಂಬಂಧ? ಒಂದು ವೇಳೆ ಹನಿಟ್ರ್ಯಾಪ್‌ ಗೆ ಒಳಗಾಗಿದ್ದರೆ ಕರ್ನಾಟಕದವರು ಅರ್ಜಿ ಹಾಕಲಿ. ಮುಂದೆ ನಾವೇ ನೋಡಿಕೊಳ್ಳುತ್ತೇವೆ. ನಿಮಗೆ ಕೆಲಸ ಇಲ್ಲ ಎಂದರೆ ಬೇರೆ ಯಾವುದಾದರೂ ಕೆಲಸ ಮಾಡಿ. ಸುಖಾಸುಮ್ಮನೆ ನ್ಯಾಯಾಲಯದ ಸಮಯವನ್ನು ಹಾಳು ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟಿತು.

ಒಂದು ವೇಳೆ ನ್ಯಾಯಾಧೀಶರು ಹನಿಟ್ರ್ಯಾಪ್‌ ಗೆ ಒಳಗಾಗಿದ್ದರೆ ಅವರು ನೋಡಿಕೊಳ್ಳುತ್ತಾರೆ. ಇದಕ್ಕೆ ನೀವೇಕೆ ತಲೆ ಕೆಡಿಸಿಕೊಳ್ಳುತ್ತೀರಿ? ರಾಜಕೀಯದ ನಾನ್ಸೆನ್?ಸ ವಿಚಾರಗಳನ್ನು ವಿಚಾರಣೆ ಮಾಡಲು ನಮಗೆ ಸಮಯವಿಲ್ಲ. ಮತ್ತೊಮ್ಮೆ ಇಂಥ ಅರ್ಥವಿಲ್ಲದ ಪಿಐಎಲ್ ಹಾಕಬೇಡಿ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಕಟು ಶಬ್ದಗಳಲ್ಲಿ ಟೀಕೆ ಮಾಡಿತು.

ಹನಿಟ್ರ್ಯಾಪ್‌ ಒಳಗಾಗದವರೇ ಸುಮನಿರುವಾಗ ನೀವೇಕೆ? ಆಸಕ್ತಿ ವಹಿಸಿದ್ದೀರಿ? ಒಂದು ವೇಳೆ ನಿಮ ಪ್ರಕಾರ ಈ ಪ್ರಕರಣದಲ್ಲಿ ನ್ಯಾಯಾಧೀಶರು ಇದ್ದರೆ ಅದನ್ನು ಅವರು ಸರಿಪಡಿಸುತ್ತಾರೆ. ನೀವು ನಿಮ ಕೆಲಸ ನೋಡಿಕೊಳ್ಳಿ. ಇಲ್ಲದ ವಿಷಯವನ್ನು ತಲೆಗೆ ಬಿಟ್ಟುಕೊಡಬೇಡಿ. ಮೊದಲು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಮಹತ್ವವನ್ನು ತಿಳಿದುಕೊಳ್ಳಿ ಎಂದು ಸಲಹೆ ಮಾಡಿದರು.

Tags:
error: Content is protected !!