Mysore
27
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ಯುವತಿಯ ಪ್ರೀತಿಗೆ ಸಪೋರ್ಟ್ ಮಾಡಿದ ಆರೋಪ: ಯುವತಿ ಪೋಷಕರಿಂದ ಯುವಕನೋರ್ವನಿಗೆ ಹಲ್ಲೆ

ಮೈಸೂರು: ಜಿಲ್ಲೆಯ ಹುಣಸೂರು ತಾಲ್ಲೂಕಿನ ಶ್ರವಣಹಳ್ಳಿ ಗ್ರಾಮದಲ್ಲಿ ಯುವತಿಯ ಪ್ರೀತಿಗೆ ಸಪೋರ್ಟ್‌ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆ ಯುವತಿ ಪೋಷಕರು ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ.

ಹುಣಸೂರು ತಾಲ್ಲೂಕಿನ ಶ್ರವಣಹಳ್ಳಿ ಗ್ರಾಮದ ಲಕ್ಷ್ಮೀ ಎಂಬ ಯುವತಿಯೂ ಅದೇ ಗ್ರಾಮದ ಯುವಕನೊಬ್ಬನ ಪ್ರೀತಿಯಲ್ಲಿ ಬಿದ್ದಿದ್ದಳು. ಈ ಪ್ರೀತಿಗೆ ಘನವಂತ್‌ ಎಂಬಾತ ಸಪೋರ್ಟ್ ಮಾಡಿದ್ದಾನೆ ಎಂದು ಆರೋಪಿಸಿ ಯುವತಿಯ ತಂದೆ ಚೆಲುವರಾಜು ಅವರು ದ್ವೇಷದಿಂದ ಘನವಂತ್ ಸಿಕ್ಕಿದಾಗೆಲ್ಲಾ ಹಲ್ಲೆ ಮಾಡುತ್ತಿದ್ದರು. ಅಲ್ಲದೇ ಘನವಂತ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ತಡೆದು ಹಿಗ್ಗಾಮುಗ್ಗ ಥಳಿಸಿದ್ದು, ಗಂಭೀರ ಗಾಯಗೊಂಡಿದ್ದಾರೆ. ಈ ಥಳಿತದಿಂದ ಹಲ್ಲೆಗೊಳಗಾದ ಘನವಂತ್‌ನನ್ನು ಹುಣಸೂರು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಇನ್ನೂ ಚೆಲುವರಾಜ್ ಕುಟುಂಬದಿಂದ ರಕ್ಷಣೆ ಬೇಕೆಂದು ಪೋಲಿಸರ ಮೊರೆ ಹೋದ ಘನವಂತ್, ಹುಣಸೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಚೆಲುವರಾಜು, ಮಂಜುಳಾ, ಲೋಕೇಶ್, ಪರಶುರಾಮ್, ಹಣಮಂತ, ಯುವತಿ ಲಕ್ಷ್ಮಿ , ದರ್ಶನ್, ಯಶು ಸೇರಿದಂತೆ 10 ಮಂದಿ ವಿರುದ್ದ ಎಫ್‌ಐಆರ್‌ ದಾಖಲಿಸಿದ್ದಾರೆ.

 

Tags:
error: Content is protected !!