Mysore
26
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಮಂಡ್ಯ: ರೈಲಿನ ಚಕ್ರಕ್ಕೆ ತಲೆ ಕೊಟ್ಟು ಯುವತಿ ಆತ್ಮಹತ್ಯೆ

ಮಂಡ್ಯ: ಚಲಿಸುತ್ತಿದ್ದ ಚಾಮುಂಡಿ ಎಕ್ಸ್‌ಪ್ರೆಸ್‌ ರೈಲಿಗೆ ತಲೆಕೊಟ್ಟು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದ ಬಂದಿಗೌಡ ಬಡಾವಣೆಯ ಸಮೀಪದಲ್ಲಿ ನಡೆದಿದೆ.

ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಎ. ವ್ಯಾಸಂಗ ಮಾಡುತ್ತಿದ್ದ ಸುಹಾನ(19) ಎಂಬಾಕೆ ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ.

ಮೃತ ಸುಹಾನ ಮೂಲತಃ ಮೀಸಲು ಸಶಸ್ತ್ರ ಪಡೆಯ ಅನ್ಸರ್ ಪಾಷ ಎಂಬುವವರ ಮಗಳು ಸುಹಾನ. ಈಕೆ ಶುಕ್ರವಾರ ರಾತ್ರಿ ಮನೆಯಿಂದ ತನ್ನ ಸ್ಕೂಟರ್‌ನಲ್ಲಿ ಹೊರಟು ರೈಲು ಹಳಿ ಬಳಿ ಬಂದಿದ್ದಳು. ಬಳಿಕ ತನ್ನ ಸ್ಕೂಟರ್ ನಿಲ್ಲಿಸಿ ರೈಲು ಹಳಿ ಬಳಿ ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಪ್ರಕರಣದ ಸಂಬಂಧ ಮಂಡ್ಯ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಹಾನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಕಳೆದ ತಿಂಗಳು ಕೂಡ ಇದೆ ರೀತಿ ರೈಲಿಗೆ ಸಿಲುಕಿ ಮತ್ತೊಂದು ಯುವತಿ ಆತ್ಮಹತ್ಯೆಗೆ ಶರಣಾಗಿದ್ದರು.

Tags:
error: Content is protected !!