Mysore
18
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಇಡೀ ರಾಜ್ಯಾದ್ಯಂತ ಬಂದ್‌ ಯಶಸ್ವಿಯಾಗಿದೆ: ವಾಟಾಳ್‌ ನಾಗರಾಜ್‌

ಬೆಂಗಳೂರು: ಇಡೀ ರಾಜ್ಯಾದ್ಯಂತ ಬಂದ್‌ ಯಶಸ್ವಿಯಾಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ.

ಕರ್ನಾಟಕ ಬಂದ್‌ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಬಂದ್‌ ಅವರದ್ದೇ ರೂಪದಲ್ಲಿ ನಡೆದಿದೆ. ಕೆಲವು ಕಡೆ ಬಸ್‌ ಓಡಾಡುತ್ತಿವೆ. ಬಸ್‌ ಓಡಾಡುತ್ತಿದ್ದರೂ ಜನ ಮಾತ್ರ ಅದಕ್ಕೆ ಹತ್ತಿಲ್ಲ. ಬಸ್‌ ನಿಲ್ದಾಣಗಳಲ್ಲೂ ಜನ ಇಲ್ಲ. ಆದ್ದರಿಂದ ಕನ್ನಡಿಗರಿಗಾಗಿ ಕರೆದ ಬಂದ್‌ ಸಂಪೂರ್ಣ ಯಶಸ್ವಿ ಆಗಿದೆ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಹೋಟೆಲ್‌ನವರಿಗೆ ಭಾರೀ ದುರಹಂಕಾರ ಬಂದಿದೆ. ಎಲ್ಲದೂ ಪೊಲೀಸ್‌ ಕೈಯಲ್ಲೇ ಇದೆ. ಯಾರೂ ಕೂಡ ತೀರ ಹತ್ತಿಕ್ಕುವ ಮಟ್ಟಕ್ಕೆ ಹೋಗಬಾರದಿತ್ತು. ಆದರೂ ಕರ್ನಾಟಕ ಬಂದ್‌ ಯಶಸ್ವಿಯಾಗಿದೆ ಎಂದು ಹೇಳಿದರು.

ಇನ್ನು ಪ್ರತಿಭಟನೆ ನಡೆಸುತ್ತಿದ್ದ ಕನ್ನಡಪರ ಹೋರಾಟಗಾರರನ್ನು ಬಂಧಿಸಿದ ಪೊಲೀಸರ ವಿರುದ್ಧ ಕಿಡಿಕಾರಿದ ವಾಟಾಳ್‌ ನಾಗರಾಜ್‌ ಅವರು, ಯಾರು ಏನೇ ಮಾಡಿದ್ರೂ ಇವತ್ತಿನ ಬಂದ್‌ ಯಶಸ್ವಿಯಾಗಿದೆ ಎಂದು ಹೇಳಿದರು.

Tags:
error: Content is protected !!