Mysore
27
broken clouds

Social Media

ಸೋಮವಾರ, 31 ಆಗಸ್ಟ್ 2026
Light
Dark

ನಾಳೆ ಕರ್ನಾಟಕ ಬಂದ್‌ ಆಗೇ ಆಗುತ್ತದೆ: ವಾಟಾಳ್‌ ನಾಗರಾಜ್‌

ಬೆಂಗಳೂರು: ನಾಳೆ ಯಾರೇ ಏನೇ ಮಾಡಿದರೂ ಕರ್ನಾಟಕ ಬಂದ್‌ ಆಗೇ ಆಗುತ್ತದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಹೇಳಿದ್ದಾರೆ.

ಕಳೆದ ಕೆಲದ ದಿನಗಳ ಹಿಂದೆ ಮಹಾರಾಷ್ಟ್ರದ ಮರಾಠಿಗರು ಕನ್ನಡಿಗರ ವಿರುದ್ಧ ನಡೆಸಿದ ಹಲ್ಲೆ, ದಬ್ಬಾಳಿಕೆ ಖಂಡಿಸಿ ನಾಳೆ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆಕೊಟ್ಟಿವೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರು, ಯಾರೇ ಏನೇ ಮಾಡಿದರೂ ನಾಳೆ ಕರ್ನಾಟಕ ಬಂದ್‌ ಆಗೇ ಆಗುತ್ತದೆ. ರಾಜ್ಯದ ಹಲವಾರು ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ನೀಡಿವೆ. ಆದ್ದರಿಂದ ಬಂದ್‌ ಯಶಸ್ವಿಯಾಗಿ ಆಗುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಕನ್ನಡಿಗರ ರಕ್ಷಣೆಗೆಂದೇ ಬಂದ್‌ ಮಾಡಲಾಗುತ್ತಿದೆ ಎಂದರು.

 

Tags:
error: Content is protected !!