Mysore
22
broken clouds

Social Media

ಮಂಗಳವಾರ, 25 ಆಗಸ್ಟ್ 2026
Light
Dark

ಚಾಮುಂಡಿಬೆಟ್ಟದಲ್ಲಿ ಸಾಂಪ್ರದಾಯಿಕವಾಗಿ ನಡೆದ ಮಹಾಬಲೇಶ್ವರ ರಥೋತ್ಸವ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಇಂದು ಸಾಂಪ್ರದಾಯಿಕವಾಗಿ ಮಹಾಬಲೇಶ್ವರ ರಥೋತ್ಸವ ಜರುಗಿತು.

ಪ್ರತಿ ವರ್ಷದಂತೆ ಈ ವರ್ಷವೂ ಚಾಮುಂಡಿಬೆಟ್ಟದಲ್ಲಿ ಮಹಾಬಲೇಶ್ವರ ರಥೋತ್ಸವ ಜರುಗಿದ್ದು, ಚಾಮುಂಡೇಶ್ವರಿ ದೇವಸ್ಥಾನವನ್ನು ಒಂದು ಸುತ್ತು ಪ್ರದಕ್ಷಿಣೆ ನಡೆಸಿ ಮಹಾಬಲೇಶ್ವರ ರಥೋತ್ಸವ ಸಂಪನ್ನಗೊಂಡಿತು.

ರಥೋತ್ಸವದಲ್ಲಿ ಭಾಗಿಯಾಗಿದ್ದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಕುಟುಂಬ ದೇವರಿಗೆ ವಿಶೇಷ ಅರ್ಚನೆ ಸಲ್ಲಿಸಿ ನಾಡಿಗೆ ಒಳಿತಾಗಲೆಂದು ಪ್ರಾರ್ಥನೆ ಸಲ್ಲಿಸಿದರು.

ರಥೋತ್ಸವ ಆರಂಭಕ್ಕೂ ಮುನ್ನ ಪೊಲೀಸ್ ಬ್ಯಾಂಡ್ ವತಿಯಿಂದ ಮೈಸೂರು ಆಸ್ಥಾನ ಗೀತೆ ಕಾಯೌ ಶ್ರೀ ಗೌರಿ ಗೀತೆಯನ್ನು ನುಡಿಸುವ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ನೆರೆದಿದ್ದ ನೂರಾರು ಸಾರ್ವಜನಿಕರು ರಥೋತ್ಸವವನ್ನು ನೋಡಿ ಭಕ್ತಿ ಭಾವ ಮೆರೆದರು.

 

Tags:
error: Content is protected !!