Mysore
25
overcast clouds

Social Media

ಶುಕ್ರವಾರ, 28 ಆಗಸ್ಟ್ 2026
Light
Dark

ಸಿನಿಮಾ ಮೂಲಕ ಪುನೀತ್‌ ಜೀವಂತ: ನಟಿ ರಮ್ಯ

ಬೆಂಗಳೂರು: ಪುನೀತ್‌ ರಾಜಕುಮಾರ್‌ 50ನೇ ಜನ್ಮದಿನದ ಪ್ರಯುಕ್ತ  ರೀ-ರಿಲೀಸ್‌ ಆದ ʼಅಪ್ಪುʼ ಸಿನಿಮಾ  ನೋಡಲು ವೀರೇಶ್‌ ಚಿತ್ರಮಂದಿರಕ್ಕೆ ಬಂದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯ, ಸಿನಿಮಾಗಳ ಮೂಲಕ ಪುನೀತ್‌ ಜೀವಂತವಾಗಿದ್ದಾರೆ ಎಂದು ಹೇಳಿದ್ದಾರೆ.

ʼಅಪ್ಪುʼ ಸಿನಿಮಾ ರಿಲೀಸ್‌ ಆದಾಗ ಥಿಯೇಟರ್‌ಗೆ ಬಂದು ನೋಡಿದ ಆ ಹಳೆಯ ನೆನಪೆಲ್ಲಾ ಈಗ ಬರುತ್ತಿದೆ.
ಇದನ್ನೆಲ್ಲಾ ನೋಡಿದರೆ ಅಪ್ಪು ಇಲ್ಲ ಅಂತ ನಂಬೋಕೆ ಆಗುತ್ತಿಲ್ಲ. ಆದರೆ, ಸಿನಿಮಾದ ಮೂಲಕ ಅವರು ನಮ್ಮ ಮಧ್ಯ ಜೀವಂತವಾಗಿದ್ದಾರೆ ಎಂದು ಸ್ಮರಿಸಿದ್ದಾರೆ.

ಅಪ್ಪು ಸಿನಿಮಾ ರಿಲೀಸ್‌ ಅಗಿ 23 ವರ್ಷಗಳಾಗಿವೆ. ಮೊದಲ ಬಾರಿ ʼಅಪ್ಪುʼ ಸಿನಿಮಾ ನೋಡಿದಾಗ ನಾನು ಕೂಡ ಅಭಿಮಾನಿಯಾಗಿ ಹೋಗಿ ಸಿನಿಮಾ ನೋಡಿದ್ದೆ, ನಂತರ ಪುನೀತ್‌ ಜೊತೆ ನಾನು ಕೂಡ ಸಿನಿಮಾ ಮಾಡಿದ್ದೇನೆ. ಈಗ ಆ ಚಿತ್ರಗಳನ್ನು ನೋಡಿದಾಗ ಎಲ್ಲವೂ ನೆನಪಾಗುತ್ತದೆ ಎಂದರು.

ಇನ್ನೂ ಪುರಿ ಜಗನ್ನಾಥ ʼಅಪ್ಪುʼ ನಿರ್ದೇಶನ ಮಾಡಿದ್ದು, ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ ನಟಿಸಿದ್ದರು. ಈ ಸಿನಿಮಾಗೆ ಪಾರ್ವತಮ್ಮ ರಾಜಕುಮಾರ್‌ ಹಣ ಹೂಡಿದ್ದರು. 2002ರಲ್ಲಿ ಈ ಸಿನಿಮಾ ರಿಲೀಸ್‌ ಆಗಿ ಯಶಸ್ವಿ ಪ್ರದರ್ಶನ ಕಂಡಿತ್ತು.

Tags:
error: Content is protected !!