Mysore
34
few clouds

Social Media

ಶನಿವಾರ, 11 ಏಪ್ರಿಲ 2026
Light
Dark

ಬೇಲೂರು: ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ

ಬೇಲೂರು: ಕ್ಯಾಪ್ಟನ್‌ ಪ್ರಶಾಂತ ನೇತೃತ್ವದಲ್ಲಿ, ಸತತ ನಾಲ್ಕು ಗಂಟೆಯ ಕಾರ್ಯಾಚರಣೆ ನಂತರ ತಾಲೂಕಿನ ಹಳ್ಳಿಗದ್ದೆ ಗ್ರಾಮದ ಶಾಂತಿ ಎಸ್ಟೇಟ್‌ನಲ್ಲಿ ಕಾಡಾನೆ ಸೆರೆಯಾಗಿದೆ.

ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆಯ ಇಟಿಎಫ್‌ ಸಿಬ್ಬಂದಿ ಪುಂಡಾನೆಗಳನ್ನು ಗುರುತಿಸಿದ್ದರು.

ವೈದ್ಯರು ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುತ್ತಿದ್ದಂತೆ, ಕಾಡಾನೆ ಜೊತೆ ಒಂಟಿಸಲಗ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲೆಂದರಲ್ಲಿ ಓಡಾಡಿತು. ಕೊನೆಗೆ, ಅರಣ್ಯ ಇಲಾಖೆ ಸಿಬ್ಬಂದಿಗಳು ಕಷ್ಟಪಟ್ಟು ಎರಡು ಕಾಡಾನೆಗಳನ್ನು ಬೇರ್ಪಡಿಸಿದ ನಂತರ ಒಂಟಿಸಲಗ ಕುಸಿದು ಬಿತ್ತು. ಆಮೇಲೆ ಸಾಕಾನೆಗಳು ಕಾಡಾನೆಯನ್ನು ಸೆರೆ ಹಿಡಿದು ಎಳೆದು ತಂದವು.

Tags:
error: Content is protected !!