ಕೆಲಸ ಬೇಕೇ ಕೆಲಸ
. ಹುದ್ದೆಗಳ ಸಂಖ್ಯೆ: 4 ವಿಭಾಗಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ನೇಮಕ ಮಾಡಲಾಗುವುದು.
. ವಿದ್ಯಾರ್ಹತೆ: 8ನೇ ತರಗತಿ, 10ನೇ ತರಗತಿ ಮತ್ತು12ನೇ ತರಗತಿ.
. ವಯಸ್ಸಿನ ಅರ್ಹತೆಗಳು: ಕನಿಷ್ಠ 17 ವರ್ಷ 6 ತಿಂಗಳು ಆಗಿರಬೇಕು. ಗರಿಷ್ಠ 21 ವರ್ಷ ವಯಸ್ಸು ಮೀರಿರಬಾರದು.
. ಸೇವೆ ಅವಧಿ: 4 ವರ್ಷ
. ಅಗ್ನಿವೀರ್ ಕೆಟಗರಿವಾರು ವಿದ್ಯಾರ್ಹತೆಗಳ ವಿವರ:
ಅಗ್ನಿವೀರ್ (ಜನರಲ್ ಡ್ಯೂಟಿ): ಎಸ್ಎಸ್ಎಲ್‌ಸಿ ಶಿಕ್ಷಣವನ್ನು ಕನಿಷ್ಠ ಶೇ.45 ಅಂಕಗಳೊಂದಿಗೆ ಪಾಸು ಮಾಡಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳೊಂದಿಗೆ ಪಾಸ್ ಆಗಿರಬೇಕು. ಡ್ರೈವಿಂಗ್ ಲೈಸೆನ್ಸ್ ಇರುವವರಿಗೆ ಆದ್ಯತೆ ನೀಡಲಾಗುವುದು.
ಅಗ್ನಿವೀರ್ (ಟೆಕ್): ದ್ವಿತೀಯ ಪಿಯುಸಿ / 10+2 ಶಿಕ್ಷಣವನ್ನು ಭೌತಶಾಸ್ತ್ರ/ ರಸಾಯನಶಾಸ್ತ್ರ / ಗಣಿತ/ ಇಂಗ್ಲಿಷ್ ವಿಷಯಗಳಲ್ಲಿ ಓದಿ, ಶೇ.50 ಅಂಕಗಳೊಂದಿಗೆ ಪಾಸ್ ಆಗಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.40 ಅಂಕಗಳೊಂದಿಗೆ ಪಾಸ್ ಆಗಿರಬೇಕು.
ಅಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್: ಪಿಯುಸಿ ಶಿಕ್ಷಣವನ್ನು ಯಾವುದೇ ವಿಷಯಗಳಲ್ಲಿಶೇ.60 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಪ್ರತಿ ವಿಷಯದಲ್ಲಿ ಶೇ.50 ಅಂಕ ಪಡೆದಿರಬೇಕು.
ಅಗ್ನಿವೀರ್ ಟ್ರೇಡ್ಸ್‌ಮನ್: 10 ನೇ ತರಗತಿ ಪಾಸ್ ಮಾಡಿರಬೇಕು. ಪ್ರತಿ ವಿಷಯದಲ್ಲಿ ಶೇ.33 ಅಂಕ ಪಡೆದಿರಬೇಕು.
ಅಗ್ನಿವೀರ್ ಟ್ರೇಡ್ಸ್‌ಮನ್: 8ನೇ ತರಗತಿ ಪಾಸ್ ಮಾಡಿರಬೇಕು. ಪ್ರತಿ ವಿಷಯದಲ್ಲಿ ಶೇ.33 ಅಂಕ ಪಡೆದಿರಬೇಕು.
ಅಗ್ನಿವೀರ್ ಜನರಲ್ ಡ್ಯೂಟಿ – ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳಾ ಅಗ್ನಿವೀರರು:
ಎಸ್ಎಸ್ಎಲ್‌ಸಿ ಶಿಕ್ಷಣವನ್ನು ಕನಿಷ್ಠ ಶೇ.45 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಪ್ರತಿ ವಿಷಯದಲ್ಲಿ ಶೇ.33 ಅಂಕ ಪಡೆದಿರಬೇಕು. ಲೈಟ್ ಮೋಟಾರ್ ವೆಹಿಕಲ್ ವಾಹನ ಚಾಲನ ಪರವಾನಗಿ (ಡಿಎಲ್) ಇರುವವರಿಗೆ ಆದ್ಯತೆ
ನೀಡಲಾಗುವುದು.
.ಇತರೆ ಅರ್ಹತೆಗಳು: ಎನ್‌ಸಿಸಿ ಕೋಟಾ, ಕ್ರೀಡಾ ಕೋಟಾಗಳಡಿ ಕೂಡ ಹುದ್ದೆಗಳು ಇರುತ್ತವೆ.
ಆಯ್ಕೆ ವಿಧಾನಗಳು: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಇರುತ್ತವೆ.
.ಭೂ ಸೇನೆ ಅಗ್ನಿವೀರರಿಗೆ ವೇತನ ಮತ್ತು ಭತ್ಯೆಗಳು
. 1ನೇ ವರ್ಷ: ರೂ. 30,000 ಜತೆಗೆ ಇತರೆ ಭತ್ಯೆಗಳು
. 2ವರ್ಷ: ರೂ. 33,000 ಜತೆಗೆ ಇತರೆ ಭತ್ಯೆಗಳು
. 3ನೇ ವರ್ಷ: ರೂ. 36,500 ಜತೆಗೆ ಇತರೆ ಭತ್ಯೆಗಳು
. 4ನೇ ವರ್ಷ: ರೂ. 40,000 ಜತೆಗೆ ಇತರೆ ಭತ್ಯೆಗಳು
. ಅರ್ಜಿ ಸಲ್ಲಿಸುವವರು https://joinindianarmy.nic.in ಗೆ ಭೇಟಿ ನೀಡಬಹುದು.
.ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 12-03-2025
.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-04-2025





