Mysore
25
broken clouds

Social Media

ಸೋಮವಾರ, 26 ಜನವರಿ 2026
Light
Dark

ಓದುಗರ ಪತ್ರ: ಮಾಂಸದ ತ್ಯಾಜ್ಯ ಸುರಿಯುವವರಿಗೆ ಕಡಿವಾಣ ಹಾಕಿ

dgp murder case

ಎಚ್.ಡಿ.ಕೋಟೆ ತಾಲ್ಲೂಕಿನ ಶೀರನಹುಂಡಿ ಗ್ರಾಮದ ಬದಿಯಲ್ಲಿರುವ ತಾರಕ ಜಲಾಶಯದ ಬಲದಂಡೆ ನಾಲೆ (ಶೀರನಹುಂಡಿ ಕಾಲುವೆ)ಗೆ ನಿತ್ಯ ಮಾಂಸದ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದು, ದುರ್ವಾಸನೆ
ಬೀರಲಾರಂಭಿಸಿದೆ.

ಈ ಕಾಲುವೆಗೆ ತಂದು ಸುರಿಯುತ್ತಿರುವ ಮಾಂಸದ ತ್ಯಾಜ್ಯ ಹಾಗೂ ಮೂಳೆಗಳನ್ನು ಗಮನಿಸಿದರೆ, ಮಾಂಸಕ್ಕಾಗಿ ಗೋ-ಹತ್ಯೆ ಮಾಡಿ ಅದರ ತ್ಯಾಜ್ಯವನ್ನು ಇಲ್ಲಿ ತಂದು ಬೀಸಾಡುತ್ತಿರಬಹುದು ಅನಿಸುತ್ತದೆ. ಈ
ತ್ಯಾಜ್ಯದಿಂದಾಗಿ ಈ ಭಾಗದಲ್ಲಿ ದುರ್ವಾಸನೆ ಹೆಚ್ಚಾಗುವ ಜತೆಗೆ ಮಾಂಸದ ತ್ಯಾಜ್ಯ ತಿನ್ನಲು ಕಾಡುಪ್ರಾಣಿಗಳು ಬರುವ ಆತಂಕವೂ ಎದುರಾಗಿದೆ. ಈ ಕಾಲುವೆ ಮೇಲಿನ ರಸ್ತೆಯ ಮೂಲಕವೇ ಜನರು ಜಮೀನುಗಳಿಗೆ ಹೋಗಬೇಕಿದ್ದು, ದುರ್ವಾಸನೆಯನ್ನು ತಾಳಲಾರದೆ ಮೂಗು ಮುಚ್ಚಿಕೊಂಡು ಓಡಾಡಬೇಕಿದೆ.

ಅಲ್ಲದೆ ಕಾಲುವೆಗಳನ್ನು ಸ್ವಚ್ಛಗೊಳಿಸದ ಪರಿಣಾಮ ಕಾಲುವೆಗಳ ಒಳಗೆ ಗಿಡಗಂಟಿಗಳು ಮಾತ್ರವಲ್ಲದೇ ಮರಗಳೂ ಬೆಳೆದುಕೊಂಡಿದ್ದು, ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಕಾಲುವೆಗಳನ್ನು ಸ್ವಚ್ಛಗೊಳಿಸುವ ಜತೆಗೆ ಕಾಲುವೆಗೆ ಮಾಂಸದ ತ್ಯಾಜ್ಯವನ್ನು ತಂದು ಸುರಿಯುವವರಿಗೆ ಕಡಿವಾಣ ಹಾಕಬೇಕಿದೆ.

-ಪ್ರಶಾಂತ್, ಎಚ್.ಡಿ.ಕೋಟೆ ತಾ.

 

Tags:
error: Content is protected !!