Mysore
18
broken clouds

Social Media

ಶನಿವಾರ, 31 ಜನವರಿ 2026
Light
Dark

ಓದುಗರ ಪತ್ರ | ರಾಜ್ಯಪಾಲರಿಂದ ಗಿಣಿ ಪಾಠ!

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರವರು ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಇತ್ತೀಚೆಗೆ ಮಾಡಿದ ಭಾಷಣವನ್ನು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದು, ಆಡಳಿತಾರೂಢ ಸರ್ಕಾರ ರಾಜ್ಯಪಾಲರಿಂದ ಸುಳ್ಳುಗಳನ್ನು ಹೇಳಿಸಿದೆ ಎಂದು ಆರೋಪಿಸಿದ್ದಾರೆ. ‘ರಾಜ್ಯ ಸರ್ಕಾರವೇ ಸಿದ್ಧಪಡಿಸಿದ ಈ ಭಾಷಣವನ್ನು ರಾಜ್ಯಪಾಲರು ಗಿಣಿ ಪಾಠದಂತೆ ಒಪ್ಪಿಸಿದ್ದಾರೆಯೇ ವಿನಾ ಇದರಲ್ಲಿ ಅವರ ಸ್ವಂತಿಕೆ ಏನೂ ಇದ್ದಂತೆ ತೋರುತ್ತಿಲ್ಲ’ ಎಂದಿರುವ ಆರ್. ಅಶೋಕ್‌ರವರಿಗೆ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರು ಕೇವಲ ಉತ್ಸವ ಮೂರ್ತಿಯಂತೆ ಎಂಬುದು ತಿಳಿದಿಲ್ಲವೇ? ಈ ಹಿಂದೆ ಬಿಜೆಪಿ ಸರ್ಕಾರ ಅಽಕಾರದಲ್ಲಿದ್ದಾಗ, ಉಪ ಮುಖ್ಯಮಂತ್ರಿಯಾಗಿದ್ದ ಅಶೋಕ್‌ರವರು ಅವರ ಅಽಕಾರಾವಽ ಯಲ್ಲಿದ್ದ ರಾಜ್ಯಪಾಲರ ಗಿಣಿ ಪಾಠವನ್ನು ಈಗ ಮರೆತಿದ್ದಾರೆಯೇ? –ಕೆ. ವಿ. ವಾಸು, ವಕೀಲರು, ವಿವೇಕಾನಂದ ನಗರ, ಮೈಸೂರು.

Tags:
error: Content is protected !!