ಬೆಂಗಳೂರು: ರಾಜ್ಯದ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಬರೋಬ್ಬರಿ ೧೬ ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ಬರೆದಿದ್ದಾರೆ.
3.30 ಗಂಟೆಗಳ ಸುಧೀರ್ಘ ಬಜೆಟ್ ಮಂಡನೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರು ಈ ಅವಧಿಯಲ್ಲಿ ಒಂದು ಹನಿ ನೀರು ಕುಡಿಯದೆ ಬಜೆಟ್ ಮುಗಿಸಿದ್ದಾರೆ. ಕಳೆದ ಬಾರಿ ಮೂರು ಗಂಟೆ 10 ನಿಮಿಷ ಭಾಷಣ ಮಾಡಿದ್ದರು.
ಒಟ್ಟು 178 ಪುಟಗಳ ಬಜೆಟ್ ಭಾಷಣವನ್ನು ಬೆಳಿಗ್ಗೆ 10.15ಗಂಟೆಗೆ ಆರಂಭಿಸಿ ಮಧ್ಯಾಹ್ನ 1.45ನಿಮಿಷಕ್ಕೆ ಮುಗಿಸಿದ್ದಾರೆ.





