Mysore
22
few clouds

Social Media

ಭಾನುವಾರ, 01 ಮಾರ್ಚ್ 2026
Light
Dark

ಮೈಸೂರು: ಇತಿಹಾಸ ಪುಟ ಸೇರಿದ ಸ್ಟರ್ಲಿಂಗ್‌, ಸ್ಕೈಲೈನ್‌ ಚಿತ್ರ ಮಂದಿರಗಳು

ಮೈಸೂರು: ಇಲ್ಲಿನ ವಿದ್ಯಾರಣ್ಯಪುರಂನಲ್ಲಿರುವ ಸ್ಟರ್ಲಿಂಗ್‌ ಹಾಗೂ ಸ್ಕೈಲೈನ್‌ ಅವಳಿ ಚಿತ್ರಮಂದಿರವನ್ನು ನೆಲಸಮ ಮಾಡಲಾಗಿದ್ದು, ಇದೀಗ ಇವರೆಡು ಚಿತ್ರಮಂದಿರಗಳು ಇತಿಹಾಸದ ಪುಟ ಸೇರಿಕೊಂಡಿವೆ.

ಈ ಚಿತ್ರಮಂದಿಗಳಲ್ಲಿ ಹಾಲಿವುಡ್, ಬಾಲಿವುಡ್ ಸೇರಿದಂತೆ ಕನ್ನಡದ ಅನೇಕ ಜನಪ್ರಿಯಗಳು ಪ್ರದರ್ಶನ ಕಂಡಿದ್ದವು. ಅಲ್ಲದೇ ಹೆಸರಾಂತ ಟೈಟಾನಿಕ್, ಜುರಾಸಿಕ್ ಪಾರ್ಕ್ ಸೇರಿದಂತೆ ಜಾಕಿಚಾನ್ ನಟನೆಯ ಬಹುತೇಕ ಜನಪ್ರಿಯ ಇಂಗ್ಲಿಷ್ ಸಿನಿಮಾಗಳು ಸಹ ಈ ಅವಳಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದ್ದವು.

ಇನ್ನು ಅವಳಿ ಚಿತ್ರಮಂದಿರಗಳ ನೆಲಸಮವನ್ನು ಕಣ್ಣಾರೆ ಕಂಡ ಸಿನಿ ರಸಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಕೋವಿಡ್ ಬಳಿಕ ಈ ಅವಳಿ ಚಿತ್ರಮಂದಿರ‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿದ್ದವು. ದಿ‌ನ ಕಳೆದಂತೆ ಬಂದ್ ಆಗಿದ್ದ ಅವಳಿ ಚಿತ್ರಮಂದಿರವನ್ನ ಇದೀಗ ನೆಲಸಮ ಮಾಡಲಾಗಿದೆ.

ಈ ಹಿಂದೆ ಅಪೇರಾ, ಶಾಂತಲಾ, ತಿಬ್ಬಾದೇವಿ, ಗಣೇಶ, ರತ್ನ, ಒಲಂಪಿಯಾ ಹಾಗೂ ರಣಜಿತ್‌ ಚಿತ್ರ ಮಂದಿರಗಳನ್ನು ನೆಲಸಮ ಮಾಡಲಾಗಿತ್ತು. ಆಲ್ಲದೇ ಇತ್ತೀಚೆಗೆ ಲಕ್ಷ್ಮೀ ಮತ್ತು ಸರಸ್ವತಿ ಚಿತ್ರಮಂದಿರಗಳನ್ನು ನೆಲಸಮ ಮಾಡಲಾಗಿತ್ತು. ಅಂತೆಯೇ ಅವುಗಳ ಸಾಲಿಗೆ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಅವಳಿ ಚಿತ್ರಮಂದಿಗಳು ಸೇರಿದ್ದು ವಿಪರ್ಯಾಸ ಎನ್ನಬಹುದು.

Tags:
error: Content is protected !!