ಕೊಪ್ಪಳ: ಸಿದ್ದರಾಮಯ್ಯರಿಗೆ ಈಗ ವಯಸ್ಸಾಗಿದೆ. ಹಾಗಾಗಿ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಬಹುದು ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಈ ಕುರಿತು ಕೊಪ್ಪಳದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಈಗ ವಯಸ್ಸಾಗಿದೆ. ಅವರಿಗೆ ಆರೋಗ್ಯದ ಸಮಸ್ಯೆ ಕೂಡ ಇದೆ. ಹಾಗಾಗಿ ಅವರು ಸಿಎಂ ಸ್ಥಾನ ಬಿಟ್ಟು ಕೊಡಬಹುದು ಎಂದರು.
ಇನ್ನು ಡಿಕೆಶಿಯವರ ಹಿಂದೂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಡಿಕೆಶಿ ಹಿಂದೂವಾಗಿ ಹುಟ್ಟಿದ್ದಾರೆ. ಹಿಂದೂವಾಗಿಯೇ ಮುಂದುವರಿಯುತ್ತಾರೆ. ಅವರು ಮಾಡುತ್ತಿರುವ ಪೂಜೆ, ಹಿಂದೂ ಸಂಸ್ಕೃತಿ ಆಚರಣೆಯಾಗಿದೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅವರ ರಾಜಕೀಯ ಏನೇ ಆಗಿರಲಿ, ಅವರು ಸಾರ್ವಜನಿಕವಾಗಿ ಪೂಜೆ ಪುನಸ್ಕಾರ ಮಾಡುತ್ತಿರುವುದು ಇದೇ ಮೊದಲಲ್ಲ ಎಂದು ಹೇಳಿದರು.





