Mysore
21
mist

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಡಿಕೆಶಿ ಶಿವರಾತ್ರಿ ಆಚರಣೆ ಅವರ ವೈಯುಕ್ತಿಕ ವಿಚಾರ: ಎಂ.ಬಿ ಪಾಟೀಲ್‌

ವಿಜಯಪುರ: ಡಿಸಿಎಂ ಡಿಕೆ ಶಿವಕುಮಾರ್‌ ಶಿವರಾತ್ರಿ ಆಚರಣೆ ಅವರ ವೈಯುಕ್ತಿಕ ವಿಚಾರ. ಇದು ಪಕ್ಷದ ವಿರುದ್ಧ ಆಗುತ್ತಾ?, ಅವರು ಶಿವರಾತ್ರಿಗೆ ಹೋದರೆ ಏನಾಗುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್‌ ಶಿವರಾತ್ರಿ ಆಚರಣೆಗಾಗಿ ಕೊಯಮತ್ತೂರಿನ ಇಶಾ ಕೇಂದ್ರಕ್ಕೆ ಹೋಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಡಿಕೆ ಶಿವಕುಮಾರ್‌ ಹಿಂದೂ ಅಲ್ವಾ. ಶಿವರಾತ್ರಿ ಆಚರಣೆ ಅವರ ವೈಯುಕ್ತಿಕ ವಿಚಾರ ಪಕ್ಷದಲ್ಲ. ನನ್ನ ವೈಯುಕ್ತಿಕ ವಿಚಾರ ಪಕ್ಷದಲ್ಲ. ಪಕ್ಷ ವಿಚಾರ ನನ್ನ ವೈಯುಕ್ತಿಕ ಅಲ್ಲ. ಹೀಗಾಗಿ ಒಂದಕ್ಕೊಂದು ಮಿಕ್ಸ್‌ ಮಾಡುವ ಅವಶ್ಯಕತೆ ಇಲ್ಲ ಎಂದು ಸಮರ್ಥಿಸಿಕೊಂಡರು.

ಅಮಿತ್‌ ಶಾ ಅವರ ಜೊತೆಯಲ್ಲಿ ಡಿಕೆ ಶಿವಕುಮಾರ್‌ ಅವರು ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿ ಆದರೆ ಏನು ತಪ್ಪಿದೆ. ಅದು ವೈಯುಕ್ತಿಕ ವಿಚಾರ. ಅನೇಕ ಕಾರ್ಯಕ್ರಮಗಳಲ್ಲಿ ನಮ್ಮನ್ನು ಕರೆದಿರುತ್ತಾರೆ, ಅವರನ್ನು ಕರೆದಿರುತ್ತಾರೆ ಎಂದರು.

ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಬಾರದು ಎಂದು ತೀರ್ಮಾನಿಸಿದ್ದೇನೆ. ಈ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ತಿಳಿಸಿದರು.

Tags:
error: Content is protected !!