Mysore
26
haze

Social Media

ಬುಧವಾರ, 31 ಡಿಸೆಂಬರ್ 2025
Light
Dark

ಕುಶಾಲನಗರ | ಗಾಂಜಾ ಮಾರಾಟ; ಐವರು ಆರೋಪಿಗಳ ಬಂಧನ

ಮಡಿಕೇರಿ: ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೈಚನಹಳ್ಳಿ ನಿವಾಸಿ ಪ್ರಮೋದ್ ಕುಮಾರ್(೩೪), ರವಿಕುಮಾರ್(೨೨), ನಿಖಿಲ್ ಕುಮಾರ್(೨೪), ರಾಧಾಕೃಷ್ಣ ಬಡಾವಣೆ ನಿವಾಸಿ ದರ್ಶನ್(೨೧), ಯೋಗಾನಂದ ಬಡಾವಣೆ ನಿವಾಸಿ ಶರತ್ ನಾಯಕ್(೨೫) ಬಂಧಿತ ಆರೋಪಿಗಳು.

ಫೆ.೨೫ರಂದು ಬೈಚನಹಳ್ಳಿಯ ಜಾತ್ರೆ ಮೈದಾನದ ಸಮೀಪದಲ್ಲಿ ನಿಷೇಧಿತ ಮಾದಕ ವಸ್ತುವನ್ನು ಸರಬರಾಜು ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಪ್ರಮೋದ್ ಕುಮಾರ್ ಹಾಗೂ ದರ್ಶನ್‌ನನ್ನು ಬಂಧಿಸಿದ್ದಾರೆ. ಜೊತೆಗೆ ೨೫ ಗ್ರಾಂ ಗಾಂಜಾ ವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಫೆ.೨೬ರಂದು ಬೈಚನಹಳ್ಳಿಯ ರೈತ ಸಹಕಾರ ಭವನದ ಸಮೀಪ ಗಾಂಜಾ ಬಳಕೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮತ್ತೆ ಪೊಲೀಸರ ತಂಡ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ರವಿಕುಮಾರ್, ನಿಖಿಲ್ ಕುಮಾರ್, ಶರತ್ ನಾಯಕ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸೋಮವಾರಪೇಟೆ ಉಪವಿಭಾಗ ಡಿಎಸ್‌ಪಿ ಆರ್.ವಿ.ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ನಗರ ಪೊಲೀಸ್ ಠಾಣೆಯ ಪಿಐ ಬಿ.ಜಿ. ಪ್ರಕಾಶ್ , ಪಿಎಸ್‌ಐ ಗೀತಾ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಎರಡು ಪ್ರತ್ಯೇಕ ಪ್ರಕರಣಗಳ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೊಡಗು ಜಿಲ್ಲಾ ಪೊಲೀಸ್ ಅಧಿಕ್ಷಕ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.

Tags:
error: Content is protected !!