ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಾಳೆ ನಗರದ್ಯಾದಂತ ಶಿವರಾತ್ರಿ ಹಬ್ಬದ ಸಂಭ್ರಮವಾಗಿದ್ದು, ಜಿಲ್ಲಾಡಳಿತದಿಂದ ಮೈಸೂರಿನ ಅರಮನೆ ಆವರಣದಲ್ಲಿರುವ ತ್ರೀನೇಶ್ವರ ಸ್ವಾಮಿ ದೇವಾಲಯಕ್ಕೆ ಚಿನ್ನದ ಕೊಳಗ ಹಸ್ತಾಂತರ ಮಾಡಲಾಗಿದೆ.
ಜಿಲ್ಲಾಡಳಿತ ಖಜಾನೆಯಿಂದ ಇಂದು(ಫೆಬ್ರವರಿ.25) ಅರಮನೆ ಆವರಣದ ಆಡಳಿತ ಮಂಡಳಿಗೆ ಚಿನ್ನದ ಕೊಳಗ ಹಸ್ತಾಂತರ ಮಾಡಲಾಗಿದೆ. ಇದನ್ನು ನಾಳೆ(ಫೆ.26) ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ತ್ರೀನೇಶ್ವರ ದೇವಸ್ಥಾನದ ಶಿವಲಿಂಗಕ್ಕೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದ ಬಳಿಕ ಶಿವಲಿಂಗಕ್ಕೆ ಧಾರಣೆ ಮಾಡಲಾಗುತ್ತದೆ.
ಮೈಸೂರು ಸಂಸ್ಥಾನದ ಅಂದಿನ ಅರಸ ಜಯಚಾಮರಾಜೇಂದ್ರ ಒಡೆಯರ್ ಅವರು ಈ ಚಿನ್ನದ ಕೊಳಗವನ್ನು 1952 ರಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಹುಟ್ಟಿದ ನೆನಪಿನಾರ್ಥ ತ್ರೀನೇಶ್ವರ ದೇವಾಲಯಕ್ಕೆ ಕೊಡುಗೆ ನೀಡಿರುವ ಚಿನ್ನದ ಮುಖವಾಡವಾಗಿದೆ. ಈ ಚಿನ್ನದ ಕೊಳಗ ಸುಮಾರು 11 ಕೆ.ಜಿ. ಇದೆ. ಇದನ್ನು ಪ್ರತಿ ವರ್ಷ ಶಿವರಾತ್ರಿ ಹಬ್ಬದ ದಿನದಂದು ಶಿವಲಿಂಗಕ್ಕೆ ಧಾರಣೆ ಮಾಡಲಾಗುತ್ತದೆ. ಹೀಗಾಗಿ ತ್ರೀನೇಶ್ವರ ದೇವಾಲಯಕ್ಕೆ ನಾಳೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.





