ಬೆಳಗಾವಿ: ಕನ್ನಡ ಮಾತನಾಡು ಎಂಬ ವಿಷಯಕ್ಕೆ ಆದ ಗಲಾಟೆಯಲ್ಲಿ ಕಂಡಕ್ಟರ್ ಮೇಲಿನ ವಿರುದ್ಧ ದಾಖಲು ಮಾಡಲಾಗಿದ್ದ ಪೋಕ್ಸೋ ಕೇಸ್ ಅನ್ನು ಸಂತ್ರಸ್ತೆ ತಾಯಿ ವಾಪಸ್ ಪಡೆದಿದ್ದಾರೆ.
ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತೆ ತಾಯಿ, ಯಾವುದೇ ಒತ್ತಡವಿಲ್ಲದೇ ನಿರ್ವಾಹಕ ಮಹದೇವಪ್ಪ ಅವರ ವಿರುದ್ಧ ನೀಡಿದ್ದ ಪೋಕ್ಸೋ ಕೇಸ್ ವಾಪಸ್ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
ನಾವೂ ಸಹ ಕನ್ನಡಿಗರೇ, ನನ್ನ ಮಕ್ಕಳು ಚಿಕಿತ್ಸೆ ವಿಚಾರವಾಗಿ ಆಸ್ಪತ್ರೆಗೆ ಹೋಗಿದ್ದ ಸಮಯದಲ್ಲಿ ಟಿಕೆಟ್ ವಿಚಾರವಾಗಿ ಜಗಳವಾಗಿದೆ. ಇದನ್ನು ರಾಜ್ಯಗಳ ನಡುವಿನ ಭಾಷೆಯ ಜಗಳಕ್ಕೆ ತಿರುಗಿಸಿದ್ದಾರೆ. ಬಾಷೆ ಮರಾಠಿ ಆಗಿದ್ದರೂ, ನಾವು ಕನ್ನಡಿಗರು. ಇದರಿಂದ ಬೇಸರವಾಗಿದೆ. ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.





