Mysore
19
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ಪ್ರಯಾಗ್‌ ರಾಜ್ ಮಹಾಕುಂಭಮೇಳಕ್ಕೆ ನಾಳೆ ಅದ್ಧೂರಿ ತೆರೆ: ಖಾಸಗಿ ವಾಹನಗಳಿಗೆ ನಿರ್ಬಂಧ 

ಪ್ರಯಾಗ್‌ರಾಜ್:‌ 144 ವರ್ಷಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ನಾಳೆ ಅದ್ಧೂರಿಯಾಗಿ ತೆರೆಬೀಳಲಿದೆ. ನಾಳೆ ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಕೊನೆಯ ಪುಣ್ಯಸ್ನಾನಕ್ಕೆ ತಯಾರಿ ನಡೆಯುತ್ತಿದೆ.

ನಾಳೆ ಕೊನೆಯ ಪುಣ್ಯಸ್ನಾನ ನಡೆಯಲಿರುವ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮವನ್ನು ನೋ ವೆಹಿಕಲ್‌ ಝೋನ್‌ ಎಂದು ಘೋಷಣೆ ಮಾಡಲಾಗಿದೆ.

ಇಂದು ಮತ್ತು ನಾಳೆ ಖಾಸಗಿ ವಾಹನಗಳಿಗೆ ಪ್ರಯಾಗ್‌ರಾಜ್‌ಗೆ ಪ್ರವೇಶ ಇರುವುದಿಲ್ಲ. ಸ್ಥಳೀಯ ಆಡಳಿತ ಮತ್ತು ವೈದ್ಯಕೀಯ ತುರ್ತು ಸೇವೆಗಳ ವಾಹನಗಳಿಗೆ ಮಾತ್ರ ಪ್ರವೇಶ ಇರುವುದು ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ.

ಇನ್ನು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಅತಿದೊಡ್ಡ ಧಾರ್ಮಿಕ ಸಮ್ಮೇಳನದಲ್ಲಿ ಈವರೆಗೂ 63 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.

ವಿಶ್ವದಾದ್ಯಂತ ಕುಂಭಮೇಳಕ್ಕೆ ಕೋಟ್ಯಾಂತರ ಜನರು ಭೇಟಿ ನೀಡಿದ್ದು, ನಾಳೆ ವಿಶ್ವವಿಖ್ಯಾತ ಮಹಾಕುಂಭಮೇಳ ಅಂತ್ಯಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಇಂದು ಹಾಗೂ ನಾಳೆ ಕೋಟ್ಯಾಂತರ ಜನರು ಪುಣ್ಯಸ್ನಾನ ಮಾಡಲಿದ್ದು, ದಾಖಲೆ ನಿರ್ಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!