ರಾವಲ್ಪಿಂಡಿ: ಮೊದಲ ಪಂದ್ಯ ಗೆಲುವಿನ ಆತ್ಮವಿಸ್ವಾಸದಲ್ಲಿರುವ ಕಿವೀಸ್ ಪಡೆಯು ಬಾಂಗ್ಲಾದೇಶದ ವಿರುದ್ಧ ನಡೆಯುವ ಎರಡನೇ ಪಂದ್ಯ ಗೆದ್ದು ನಾಲ್ಕರ ಘಟ್ಟ ಪ್ರವೇಶಿಸುವತ್ತ ಚಿತ್ತ ನೆಟ್ಟಿದೆ.
ಇಂದು (ಫೆ.24) ರಾವಲ್ಪಿಂಡಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಟೂರ್ನಿಯ ʼಎʼ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ.
ಮಿಚೆಲ್ ಸ್ಯಾಂಟನರ್ ನಾಯಕತ್ವದ ಕಿವೀಸ್ ಬಳಗವು ಮೊದಲ ಪಂದ್ಯದಲ್ಲಿ ಅತಿಥೆಯ ಪಾಕಿಸ್ತಾನವನ್ನು 60 ರನ್‌ಗಳಿಂದ ಸೋಲಿಸಿ ಟೂರ್ನಿಯ ಶುಭಾರಂಭ ಮಾಡಿತ್ತು. ಜೊತೆಗೆ 1.200 ನೆಟ್ ರನ್ ರೇಟ್ ಕೂಡ ಇದೆ.
ಇನ್ನೊಂದೆಡೆ ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ 6 ವಿಕೆಟ್‌ಗಳಿಂದ ಸೋತಿರುವ ಬಾಂಗ್ಲಾದೇಶ ತಂಡವು, ಸೆಮಿಫೈನಲ್ ಅಡುವ ಕನಸು ಜೀವಂತವಾಗಿರಿಸಿಕೊಳ್ಳಬೇಕೆಂದರೆ ಈ ಪಂದ್ಯ ಜಯಿಸಲೇಬೇಕಾದ ಒತ್ತಡದ ಸ್ಥಿತಿಯಲ್ಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 2.30
ಸ್ಥಳ: ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್ ಸ್ಟಾರ್





