Mysore
24
clear sky

Social Media

ಶನಿವಾರ, 24 ಜನವರಿ 2026
Light
Dark

ಜನಧ್ವನಿಗೆ ನಮ್ಮ ಸರ್ಕಾರ ಬೆಲೆ: ಸಚಿವ ಶಿವರಾಜ ತಂಗಡಗಿ

ಕೊಪ್ಪಳ: ಕಾರ್ಖಾನೆ ಸ್ಥಾಪನೆಗಿಂತ ನಮಗೆ ರೈತರ ಹಾಗೂ ಜನರ ಆರೋಗ್ಯ ರಕ್ಷಣೆ ಮುಖ್ಯ. ಜನಧ್ವನಿಗೆ ನಮ್ಮ ಸರ್ಕಾರ ಬೆಲೆ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಇಂದು (ಫೆ.23) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕೇಂದ್ರದ ಸಮೀಪದಲ್ಲಿಯೇ ಬಲ್ಟೋಟಾ ಸ್ಟೀಲ್‌ ಮತ್ತು ಪವರ್‌ ಲಿಮಿಟೆಡ್‌ (ಬಿಎಸ್‌ಪಿಎಲ್‌) ಕಂಪನಿ ಉಕ್ಕಿನ ಕಾರ್ಖಾನೆ ಸ್ಥಾಪನೆ ಮಾಡಲು ಜನರ ವಿರೋಧವಿದ್ದು, ಕಾರ್ಖಾನೆ ಸ್ಥಾಪನೆಗಿಂತ ಜನರ ಆರೋಗ್ಯ ರಕ್ಷಣೆಯೇ ಮುಖ್ಯ ಎಂದು ಹೇಳಿದರು.

ಕೆಲವರು ಕಾರ್ಖಾನೆ ಬೇಕು ಎಂದು ಹೇಳಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಕಾರ್ಖಾನೆ ವಿಚಾರದಲ್ಲಿ ನಮ್ಮ ಸರ್ಕಾರದ ದ್ವಂದ್ವ ನಿಲುವಿನ ಪ್ರಶ್ನೆಯೇ ಇಲ್ಲ ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರುವೆ ಎಂದು ತಿಳಿಸಿದರು.

ಕಾರ್ಖಾನೆ ಸ್ಥಾಪನೆಗಿಂತ ರೈತರ ಹಿತವೇ ಮುಖ್ಯ. ಈ ಬಗ್ಗೆ ಕೊಪ್ಪಳ ಶಾಸಕ ರಾಘವೇಂದ್ರ, ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಹಿರಿಯರಾದ ಬಸವರಾಜ ರಾಯರೆಡ್ಡಿ ಎಲ್ಲರೂ ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮಾತನಾಡುತ್ತೇವೆ ಎಂದರು.

ಹಾಗೆಯೇ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳಿಂದ ದೂಳು ಬರುತ್ತಿದ್ದರೆ ನೋಟಿಸ್‌ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

 

Tags:
error: Content is protected !!