Mysore
18
scattered clouds

Social Media

ಶನಿವಾರ, 24 ಜನವರಿ 2026
Light
Dark

ಚಾಮರಾಜನಗರ: ಟೊಮೊಟೋ ಫಸಲನ್ನು ಕಿತ್ತು ಬಿಸಾಡಿದ ದುಷ್ಕರ್ಮಿಗಳು

ಚಾಮರಾಜನಗರ: ತಾಲೂಕಿನ ಸೊತ್ತನಹುಂಡಿ( ಗಣಿಗನೂರು ಸರ್ವೇ ನಂ) ಗ್ರಾಮದಲ್ಲಿ ದ್ವೇಷದ ಕಾರಣಕ್ಕೋ ಮತ್ತೀನ್ಯಾವ ಕಾರಣಕ್ಕೋ ರೈತನ ಟೊಮೆಟೋ ಫಸಲ ಅನ್ನು ನಾಶ ಮಾಡಿರುವ ಘಟನೆ ನಡೆದಿದ್ದು, ರೈತ ಕಂಗಲಾಗಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಸೊತ್ತನಹುಂಡಿ ಗ್ರಾಮದಲ್ಲಿ ಓರ್ವ ರೈತ ಕಷ್ಟಪಟ್ಟು ಬೆಳೆದಿದ್ದ ಟೊಮೊಟೋ ಹಣ್ಣನ್ನು ಇಂದು(ಫೆಬ್ರವರಿ.22) ಯಾರೋ ದುಷ್ಕರ್ಮಿಗಳು ಕಿತ್ತು ಬಿಸಾಡಿದ್ದಾರೆ.

ಈ ದುರ್ಘಟನೆ ರೈತ ಮಹೇಶ್ ಎಂಬವರಿಗೆ ಸೇರಿದ್ದ ಜಮೀನಿನಲ್ಲಿ ನಡೆದಿದ್ದು, ಮುಕ್ಕಾಲು ಎಕರೆ ಫಸಲು ನಾಶವಾಗಿದೆ. ಟೊಮೊಟೋ ಫಸಲು ಇನ್ನೊಂದು ತಿಂಗಳಲ್ಲಿ ಕಟಾವಿನ ಹಂತಕ್ಕೆ ಬರುತ್ತಿತ್ತು. ಆದರೆ ಇದನ್ನು ಸಹಿಸದ ಕಿಡಿಗೇಡಿಗಳು ಟೊಮೆಟೊ ಗಿಡಗಳನ್ನು ಕಿತ್ತು ಹಾಕಿದ್ದಾರೆ.

ಇನ್ನು ತಿಂಗಳಲ್ಲಿ ಬಂಪರ್ ಆದಾಯ ನಿರೀಕ್ಷೆ ಮಾಡಿದ್ದ ಮಹೇಶ್ ಅವರಿಗೆ ಅಂದಾಜು 3 ಲಕ್ಷ ರೂ. ರಷ್ಟು ನಷ್ಟ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!