Mysore
27
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಪಾರ್ಕ್‌ ಮಾಡಿದ್ದ ಕಾರಿನಲ್ಲೇ ಹೃದಯಾಘಾತದಿಂದ ಓರ್ವ ಯುವಕ ಸಾವು

ಬೆಂಗಳೂರು: ನಗರದ ಬ್ರೂಕ್‌ ಫೀಲ್ಡ್‌ ರಸ್ತೆಯಲ್ಲಿ ಪಾರ್ಕ್‌ ಮಾಡಿದ್ದ ಕಾರಿನಲ್ಲಿ ಹೃದಯಾಘಾತದಿಂದ ಓರ್ವ ಯುವಕ ಸಾವನ್ನಪ್ಪಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ದುರಂತ ಫೆಬ್ರವರಿ. 20 ರಂದು ಸಂಭವಿಸಿದ್ದು, ಘಟನೆಯ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ಮೃತಪಟ್ಟಿರುವ ವ್ಯಕ್ತಿಯೂ ತನ್ನ ಗ್ರ್ಯಾಂಡ್‌ ಐಟೆನ್‌ ಕಾರಿನಲ್ಲಿ ಸಾವನ್ನಪ್ಪಿದ್ದು, ಮೃತದೇಹವನ್ನು ನೋಡಿದ ಅಪಚರಿತ ವ್ಯಕ್ತಿ ಮತ್ತು ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಮೃತದೇಹವನ್ನು ಸ್ಥಳಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್‌ ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:
error: Content is protected !!