Mysore
19
mist

Social Media

ಶನಿವಾರ, 10 ಜನವರಿ 2026
Light
Dark

ಕನ್ನಡದ ಭವಿಷ್ಯ ಕರಾಳವಾಗಿದೆ: ಪುರುಷೋತ್ತಮ ಬಿಳಿಮಲೆ

ಬೆಂಗಳೂರು: ರಾಜ್ಯದಲ್ಲಿ ಕನ್ನಡ ಶಾಲೆಗಳು ಈಗಾಗಲೇ ನಶಿಸಿಹೋಗಿವೆ. ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯ ಭವಿಷ್ಯ ಕರಾಳವಾಗಲಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರೊಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದ್ದಾರೆ.

ಕ್ರಿಯಾ ಮಾಧ್ಯಮ ಏರ್ಪಡಿಸಿದ್ದ ಮಾತೃ ಭಾಷೆ ಹಾಗೂ ಕೆಂಪು ಪುಸ್ತಕ ದಿನವನ್ನು ಉದ್ದೇಶೀಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಹಾಗೂ ಅಸ್ಮಿತೆಯ ಮುಂದೆ ಹಲವು ಸವಾಲುಗಳಿವೆ. ಕನ್ನಡ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಳ್ಳದೆ ಹೋದಲ್ಲಿ ಭಾಷೆ ಸಂಸ್ಕೃತಿ ಇಲ್ಲದಂತಾಗುತ್ತದೆ ಎಂದು ಹೇಳಿದರು.

ಸಾಹಿತಿ, ಪತ್ರಕರ್ತ ಜಿ.ಎನ್‌ ಮೋಹನ್‌ ʼಓದುವ ಖುಷಿʼ ಕೃತಿ ಬಿಡುಗಡೆ ಮಾಡಿ ನಂತರ ಮಾತನಾಡಿದ ಅವರು, ಪುಸ್ತಕ ಎನ್ನುವುದು ಮನುಷ್ಯರಲ್ಲಿ ಬದಲಾವಣೆಯನ್ನು ತರುವ ಪ್ರಮುಖ ಅಸ್ತ್ರ. ಸಮಾಜ ಜಡವಾಗಿ ಇರಲು ಬಿಡದ ಬದಲಾವಣೆಯ ವೇಗವರ್ಧಕ, ಪುಸ್ತಕ ಪ್ರೀತಿ ಬಲಪಸಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಮುಖ್ಯಸ್ಥರಾದ ಬಸವರಾಜ ಕಲ್ಕುಡಿ ಅವರು ಮಾತನಾಡಿ, ಆಧುನಿಕ ತಂತ್ರಜ್ಞಾನ ಹಾಗೂ ಸಾಧನಗಳಿಂದಾಗಿ ಯುವ ಪೀಳಿಗೆ ಪುಸ್ತಕ ಓದುವುದರಿಂದ ಸಂಪೂರ್ಣವಾಗಿ ವಿಮುಖರಾಗುತ್ತಿದ್ದಾರೆ. ಓದಿನತ್ತ ಅವರನ್ನು ಸೆಳೆಯುವುದು ಸವಾಲಿನ ಕೆಲಸವಾಗಿದೆ ಎಂದರು.

ಕ್ರಿಯಾ ಮಾಧ್ಯಮದ ಎನ್‌ಕೆ ವಸಂತರಾಜ್‌, ಕೆಎಸ್‌ ವಿಮಲಾ, ಕೃತಿಯ ಅನುವಾದಕರಾದ ತಡಗಳಲೆ ಸುರೇಂದ್ರ ರಾವ್‌ ಉಪಸ್ಥಿತರಿದ್ದರು.

Tags:
error: Content is protected !!