Mysore
27
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಪ್ರಧಾನಿಗೆ 2ನೇ ಪ್ರಧಾನ ಕಾರ್ಯದರ್ಶಿಯಾಗಿ ಶಕ್ತಿಕಾಂತ್‌ ದಾಸ್‌

ನವದೆಹಲಿ: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ 25ನೇ ಗವರ್ನರ್‌ ಆಗಿ ಶಕ್ತಿಕಾಂತ್‌ ದಾಸ್‌ ಅವರು ಕಾರ್ಯ ನಿರ್ವಹಿಸಿ, ಡಿ.10ರಂದು ನಿವೃತ್ತರಾದರು. ಅವರ ಸ್ಥಾನಕ್ಕೆ ಸಂಜಯ್‌ ಮಲ್ಹೋತ್ರಾ ಅವರನ್ನು ಸರ್ಕಾರ ನೇಮಕ ಮಾಡಿದೆ.

ಸುಮಾರು 6 ವರ್ಷಗಳ ಕಾಲ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಆಗಿ ಭಾರತೀಯ ಬ್ಯಾಂಕ್‌ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವಲ್ಲಿ ಹಲವಾರು ಹಣಕಾಸು ನೀತಿ ನಿಯಮಗಳನ್ನು ಕೈಗೊಂಡಿದ್ದಾರೆ.

ಇದೀಗ ಶಕ್ತಿಕಾಂತ್‌ ದಾಸ್‌ ಅವರನ್ನು ಪ್ರಧಾನಿ ಅವರ ಪ್ರಧಾನ ಕಾರ್ಯದರ್ಶಿ-2 ಹುದ್ದೆಗೆ ನೇಮಿಸಲಾಗಿದೆ.

ಸದ್ಯ ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ-1 ಹುದ್ದೆಯಲ್ಲಿ ಪ್ರಮೋದ್‌ ಕುಮಾರ್‌ ಮಿಶ್ರಾ ಇದ್ದಾರೆ.

Tags:
error: Content is protected !!