Mysore
14
broken clouds

Social Media

ಶನಿವಾರ, 31 ಜನವರಿ 2026
Light
Dark

ಓದುಗರ ಪತ್ರ | ಮಧ್ಯಾಹ್ನದ ವೇಳೆ ಸಿಗ್ನಲ್‌ ಫ್ರೀ ಮಾಡಿ

ಓದುಗರ ಪತ್ರ

ಬೇಸಿಗೆಕಾಲ ಆರಂಭಗೊಳ್ಳುತ್ತಿದ್ದು, ದಿನೇದಿನೇ ತಾಪಮಾನ ಏರಿಕೆ ಯಾಗುತ್ತಿದೆ. ಅದರಲ್ಲಿಯೂ ಮಧ್ಯಾಹ್ನ ೧೨ ಗಂಟೆಯಾಗುತ್ತಿದ್ದಂತೆ ಉಷ್ಣಾಂಶ ೩೦ ಡಿಗ್ರಿ ದಾಟುತ್ತಿದ್ದು, ಉರಿಯುವ ಬಿಸಿಲಿನಲ್ಲಿ ರಸ್ತೆಗಿಳಿಯು ವುದೇ ಕಷ್ಟವಾಗಿದೆ.

ಮೈಸೂರಿನ ಕೆಲವು ವೃತ್ತಗಳಲ್ಲಿ ಸಿಗ್ನಲ್ ಲೈಟ್‌ಗಳು ಬೆಳಿಗ್ಗೆಯಿಂದ ರಾತ್ರಿ ಯವರೆಗೂ ಕಾರ್ಯನಿರ್ವಹಿಸುತ್ತಿದ್ದು, ಮಧ್ಯಾಹ್ನದ ವೇಳೆ ವಾಹನ ದಟ್ಟಣೆ ಇಲ್ಲದಿದ್ದರೂ ಜನರು ಬಿಸಿಲಿನಲ್ಲೇ ನಿಲ್ಲುವಂತಾಗಿದೆ. ಸಾಮಾನ್ಯ ವಾಗಿ ಮೈಸೂರಿನಲ್ಲಿ ಬೆಳಿಗ್ಗೆ ೬ರಿಂದ ೧೧ ಗಂಟೆಯವರೆಗೆ ಹಾಗೂ ಸಂಜೆ ೪ರಿಂದ ೯ ಗಂಟೆಯವರೆಗೆ ವಾಹನದಟ್ಟಣೆ ಹೆಚ್ಚಾಗಿರುತ್ತದೆ. ಈ ಸಂದರ್ಭ ದಲ್ಲಿ ಸಿಗ್ನಲ್ ಲೈಟ್‌ಗಳು ಅತ್ಯವಶ್ಯ. ಆದರೆ ಕೆಲ ಭಾಗಗಳಲ್ಲಿ ವಾಹನ ದಟ್ಟಣೆ ಇಲ್ಲದಿದ್ದರೂ ಸಿಗ್ನಲ್ ಲೈಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಸುಡುವ ಬಿಸಿಲಿನಲ್ಲಿ ವಾಹನ ಸವಾರರು ರಸ್ತೆಯಲ್ಲಿ ನಿಲ್ಲುವಂತಾಗಿದೆ. ಇದರಿಂದಾಗಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ವಾಹನ ಗಳಲ್ಲಿ ಸಂಚರಿಸುವಾಗ, ಬಿಸಿಲಿನ ತಾಪಕ್ಕೆ ಅಸ್ವಸ್ಥಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸಂಚಾರ ಪೊಲೀಸರು ಈ ಬಗ್ಗೆ ಗಮನಹರಿಸಿ ವಾಹನ ದಟ್ಟಣೆ ಕಡಿಮೆ ಇರುವ ಆದಿಚುಂಚನಗಿರಿ ರಸ್ತೆಯ ಅಗರ್‌ವಾಲ್ ಕಣ್ಣಿನ ಆಸ್ಪತ್ರೆ ವೃತ್ತ, ಕುವೆಂಪು ನಗರದ ಕಾಂಪ್ಲೆಕ್ಸ್ ವೃತ್ತ ಸೇರಿದಂತೆ ಇತರೆ ಸರ್ಕಲ್‌ಗಳಲ್ಲಿ ಮಧ್ಯಾಹ್ನದ ವೇಳೆ ಸಿಗ್ನಲ್ ಫ್ರೀ ಮಾಡುವುದು ಒಳಿತು. -ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು

 

Tags:
error: Content is protected !!