Mysore
25
haze

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಚಾಮುಂಡಿಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ: ಹತ್ತಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲು

ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಕಿಡಿಗೇಡಿಗಳು ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ.

ಯಾರೊ ಕಿಡಿಗೇಡಿಗಳು ಧೂಮಪಾನ ಮಾಡಲು ಹೋಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಉರಿ ಬಿಸಿಲಿನಿಂದ ಒಣಗಿ ನಿಂತ ಮರಗಿಡಗಳು ಬೆಂಕಿ ಕೆನ್ನಾಲಿಗೆಗೆ ಬೂದಿಯಾಗಿವೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಬಿಸಿಲು ಹಾಗೂ ಗಾಳಿಯ ರಭಸ ಜಾಸ್ತಿಯಾಗಿರುವ ಕಾರಣ ಬೆಂಕಿ ಮತ್ತಷ್ಟು ಎಕರೆ ಅರಣ್ಯಕ್ಕೆ ವ್ಯಾಪಿಸುತ್ತಿದೆ ಎನ್ನಲಾಗಿದೆ.

 

Tags:
error: Content is protected !!