Mysore
24
overcast clouds

Social Media

ಗುರುವಾರ, 06 ಆಗಸ್ಟ್ 2026
Light
Dark

ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತಾ ಪ್ರಮಾವಚನ ಸ್ವೀಕಾರ

ನವದೆಹಲಿ: ದೆಹಲಿಯ ನೂತನ ಸಿಎಂ ಆಗಿ ಇಂದು ರೇಖಾ ಗುಪ್ತಾ ಅವರು ಪ್ರಮಾಣವಚನ ಸ್ವೀಕರಿಸಿದರು.

ಲೆಫ್ಟಿನೆಂಟ್‌ ಗವರ್ನರ್‌ ವಿ ಕೆ ಸಕ್ಸೆನಾ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ದೆಹಲಿಯ 9ನೇ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರ ಜೊತೆಗೆ ಹೊಸದಾಗಿ ಆಯ್ಕೆಯಾದ ಆರು ಮಂದಿ ಶಾಸಕರು ಪರ್ವೇಶ್‌ ವರ್ಮಾ, ಆಶಿಶ್‌ ಸೂದ್‌, ಪಂಕಜ್‌ ಸಿಂಗ್‌, ಮಂಜಿಂದರ್‌ ಸಿಂಗ್‌ ಸಿರ್ಸಾ, ಕಪಿಲ್‌ ಮಿಶ್ರಾ ಮತ್ತು ರವೀಂದರ್ ಇಂದ್ರಜ್‌ ಅವರು ಸಹ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್‌ ಕಲ್ಯಾಣ್‌ ಸೇರಿದಂತೆ ಹಲವು ರಾಜ್ಯಗಳ ಸಿಎಂ ಹಾಗೂ ಕೇಂದ್ರ ಸಚಿವರುಗಳು ಭಾಗಿಯಾಗಿದ್ದರು.

 

Tags:
error: Content is protected !!