Mysore
23
scattered clouds

Social Media

ಶುಕ್ರವಾರ, 14 ಮಾರ್ಚ್ 2025
Light
Dark

ಈಗಷ್ಟೇ ಅಲ್ಲ, ಪೂರ್ಣಾವಧಿಯವರೆಗೂ ಸಿದ್ದರಾಮಯ್ಯ ಅವರೇ ಸಿಎಂ: ಶಿವಾನಂದ ಪಾಟೀಲ

ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವಉ ಈಗಷ್ಟೇ ಅಲ್ಲ, ಪೂರ್ಣಾವಧಯವರೆಗೂ ಅವರೇ ಮುಖ್ಯಮಂತ್ರಿಯಾಗಿರಲಿದ್ದು, ಅದರಲ್ಲಿ ತಪ್ಪೇನಿದೆ ಎಂದು ಸಚಿವ ಶಿವಾನಂದ ಪಾಟೀಲ ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು(ಫೆಬ್ರವರಿ.17) ಸಿಎಂ ಪೂರ್ಣಾವಧಿಯವರೆಗೆ ಬಗ್ಗೆ ಕೆಲ ಸಚಿವರ ಹೇಳಿಕೆಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ಅವಧಿಯಲ್ಲೂ ಸಿದ್ದರಾಮಯ್ಯ ಅವರು ಸಿಎಂ ಆಗಿರುವ ಅವಶ್ಯಕತೆ ಇದೆ. ಆದರೆ ನಾನು ಸಿಎಂ ವಿಚಾರದಲ್ಲಿ ಭವಿಷ್ಯ ನುಡಿಯುವಂತಹನು ಅಲ್ಲ. ಅಲ್ಲದೇ ಮುಖ್ಯಮಂತ್ರಿ ಸ್ಥಾನದಲ್ಲಿ ಯಾರನ್ನು ಮುಂದುವರಿಸಬೇಕು ಅಥವಾ ಬಿಡಬೇಕು ಎಂಬುದನ್ನು ಸಿಎಲ್‌ಪಿ ಮತ್ತು ನಮ್ಮ ಪಕ್ಷದ ಹೈಕಮಾಂಡ್‌ ತೀರ್ಮಾನಿಸುತ್ತದೆ ಎಂದು ಹೇಳಿದರು.

ಈ ವರ್ಷ 5 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ನುರಿಸುವ ನಿರೀಕ್ಷೆ ಇದೆ

ರಾಜ್ಯಾದಾದ್ಯಂತ ಕಳೆದ ವರ್ಷ ಬರಗಾಲವಿದ್ದರಿಂದ ಇಳುವರಿ ಹಾಗೂ ಕಬ್ಬು ನುರಿಸುವಿಕೆ ಮೇಲೆ ಪರಿಣಾಮ ಬೀರಿದೆ. ಹಾಗಾಗಿ ಈ ವರ್ಷ ಕಬ್ಬು ನುರಿಸುವಿಕೆಯ ಪ್ರಮಾಣ ಕಡಿಮೆ ಇರಲಿದೆ. ಆದರೆ ಈ ವರ್ಷ 5 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ನುರಿಸುವ ನಿರೀಕ್ಷೆಯಿದ್ದು, ಮುಂದಿನ ವರ್ಷ ನಾವು ಕಬ್ಬು ನುರಿಸುವ ಪ್ರಮಾಣದಲ್ಲಿ ಗುರಿ ಮೀರುವ ನಿರೀಕ್ಷೆಯಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೆಲ ಸಕ್ಕರೆ ಕಾರ್ಖಾನೆಗಳು ಶೇ.80 ರಷ್ಟು ಕಬ್ಬಿನ್‌ ಬಿಲ್‌ ಪಾವತಿಸಿದ್ದರೆ, ಇನ್ನು ಕೆಲವು ಕಾರ್ಖಾನೆಗಳು ಶೇ.75 ರವರೆಗೆ ಪಾವತಿಸಿವೆ. ಅಲ್ಲದೇ ಒಂದು ಭಾಗ ಮಾತ್ರ ಶೇ.55 ರಿಂದ ಶೇ.60 ರಷ್ಟು ಪಾವತಿಸಿವೆ. ಹೀಗಾಗಿ ರೈತರ ಎಲ್ಲ ಬಾಕಿ ಬಿಲ್‌ಗಳು ಶೀಘ್ರವೇ ಪಾವತಿಯಾಗುತ್ತವೆ ಎಂದು ಹೇಳಿದರು.

Tags: