Mysore
29
few clouds

Social Media

ಮಂಗಳವಾರ, 27 ಜನವರಿ 2026
Light
Dark

ಮೈಸೂರು ವಿವಿಗೆ ಚಾಮರಾಜನಗರ ವಿವಿಯನ್ನು ವಿಲೀನಗೊಳಿಸಿದರೆ ಪ್ರತಿಭಟನೆ ನಡೆಸಲಾಗುವುದು: ಎನ್‌.ಮಹೇಶ್‌

ಚಾಮರಾಜನಗರ: ಮೈಸೂರು ವಿಶ್ವವಿದ್ಯಾನಿಲಯಕ್ಕೆ ಚಾಮರಾಜನಗರ ವಿಶ್ವ ವಿದ್ಯಾನಿಲಯವನ್ನು ವಿಲೀನಗೊಳಿಸದೇ, ಚಾಮರಾಜನಗರ ವಿವಿ ಆಗಿಯೇ ಮುಂದುವರಿಸಿಕೊಂಡು ಹೋಗಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌.ಮಹೇಶ್‌ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಇಂದು(ಫೆಬ್ರವರಿ.16) ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅಧಿಕಾರದಲ್ಲಿ ಬಿಜೆಪಿ ಸರ್ಕಾರದಲ್ಲಿ ನೂತನವಾಗಿ ಏಳು ಹೊಸ ವಿಶ್ವ ವಿದ್ಯಾನಿಲಯಗಳನ್ನು ಸ್ಥಾಪಿಸಲಾಯಿತು. ಅಲ್ಲದೇ ಅವುಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ವಿವಿ ಅಧ್ಯಯನ ಸಮಿತಿಯೂ ಈ ವಿಶ್ವ ವಿದ್ಯಾನಿಲಯಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು 342 ಕೋಟಿ ರೂ. ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಹೀಗಿರುವಾಗ ಸರ್ಕಾರ ಈ ಹೊಸ ವಿವಿಗಳನ್ನು ಮೂಲ ವಿವಿಗಳೊಂದಿಗೆ ಮತ್ತೆ ವಿಲೀನ ಮಾಡಲು ಹೊರಟಿರುವುದು ಖಂಡನೀಯವಾಗಿದೆ ಎಂದು ಹೇಳಿದರು.

ಸರ್ಕಾರ ಈ ಏಳು ಹೊಸ ವಿವಿಗಳಿಂದ ಹಣದ ಹೊರೆ ಹೆಚ್ಚಾಗಲಿದ್ದು, ಯಾವುದೇ ಯಾವುದೇ ಲಾಭವಿಲ್ಲ ಎನ್ನುವುದು ಸರಿಯಲ್ಲ. ಇದು ಶಿಕ್ಷಣ ಕೇಂದ್ರವೇ ಹೊರತು ಯಾವುದೇ ಕಂಪನಿ ಅಲ್ಲ. ಹೀಗಾಗಿ ಗ್ರಾಮೀಣ ಭಾಗದ ಮಕ್ಕಳ ಉನ್ನತ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಈ ವಿವಿಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಅಲ್ಲದೇ ಈ ವಿವಿಗಳ ಅಭಿವೃದ್ಧಿಗೆ ಪ್ರತಿ ವರ್ಷ 25 ಕೋಟಿ ರೂ. ಅನ್ನು ಹಂತ ಹಂತವಾಗಿ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಸರ್ಕಾರ ಈ ವಿವಿಗಳನ್ನು ಸ್ಥಾಪಿಸಿದ್ದು ಬಿಜೆಪಿ ಸರ್ಕಾರ. ನಾವೇಕೆ ಇವುಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬ ಮನೋಭಾವನೆಯಿಂದ ಇದೀಗ ವಿಲೀನಕ್ಕೆ ಹೊರಟಿದೆ. ಒಂದು ವೇಳೆ ಚಾಮರಾಜನಗರ ವಿವಿಯನ್ನು ಮೈಸೂರು ವಿವಿಗೆ ವಿಲೀನ ಮಾಡಲು ಮುಂದಾದರೆ ವಿದ್ಯಾರ್ಥಿಗಳೊಂದಿಗೆ ನಮ್ಮ ಪಕ್ಷವೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇನ್ನು ಚಾಮರಾಜನಗರ ವಿವಿಗೆ ಯುಜಿಸಿ ಅನುಮೋದನೆ ದೊರೆತಿದ್ದು, 2ಎಫ್‌ ಮಾನ್ಯತೆ ಸಹ ಲಭಿಸಿದೆ. 2023 ರಿಂದ ಇಲ್ಲಿಯವರೆಗೂ ಸ್ವದೇಶಿ ಮತ್ತು ವಿದೇಶಿ ಸೇರಿ 10ಕ್ಕೂ ಅಧಿಕ ವಿವಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಅಲ್ಲದೇ ಈ ವಿವಿ ವ್ಯಾಪ್ತಿಯಲ್ಲಿರುವ ಕಾಲೇಜುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ 7686 ವಿದ್ಯಾರ್ಥಿಗಳಿದ್ದಾರೆ. ಅವರುಗಳಲ್ಲಿ 4315 ಯುವತಿಯರೇ ಉನ್ನತ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಹೀಗಾಗಿ ಆ ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸುವುದಕ್ಕಾದರೂ ಈ ವಿವಿಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿದರು.

Tags:
error: Content is protected !!