Mysore
26
scattered clouds

Social Media

ಸೋಮವಾರ, 26 ಜನವರಿ 2026
Light
Dark

ಉದಯಗಿರಿ ಪೊಲೀಸ್‌ ಠಾಣೆ ಪ್ರಕರಣ| RSS ಕೈವಾಡ ಗಲಭೆಯಲ್ಲಿ ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಣೆ: ಎಲ್‌.ನಾಗೇಂದ್ರ

Pakistani visa

ಮೈಸೂರು: ಉದಯಗಿರಿ ಪೊಲೀಸ್‌ ಠಾಣೆಯ ಗಲಭೆ ಪ್ರಕರಣದಲ್ಲಿ ಆರ್‌ಎಸ್‌ಎಸ್‌ ಕೈವಾಡವಿರುವುದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ. ಇಲ್ಲವಾದರೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್‌.ನಾಗೇಂದ್ರ ಸವಾಲ್‌ ಎಸೆದಿದ್ದಾರೆ.

ನಗರದಲ್ಲಿ ಇಂದು(ಫೆಬ್ರವರಿ.14) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಉದಯಗಿರಿ ಪೊಲೀಸ್‌ ಠಾಣೆ ಪ್ರಕರಣದ ಆರೋಪಿ ಸುರೇಶ್‌ಗೂ ಮತ್ತು ಬಿಜೆಪಿ ಪಕ್ಷಕ್ಕೂ ಸಂಬಂಧವೇ ಇಲ್ಲ. ಆತ ನಮ್ಮ ಪಕ್ಷದ ಕಾರ್ಯಕರ್ತನೇ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಪಕ್ಷ ಮತ್ತು ಆರ್‌ಎಸ್‌ಎಸ್‌ ಕಾರ್ಯಕ್ರಮಗಳಲ್ಲಿ ಹಲವರು ಫೋಟೋ ತೆಗೆಸಿಕೊಳ್ಳುತ್ತಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ. ಆದರೆ ಉದಯಗಿರಿ ಪೊಲೀಸ್‌ ಠಾಣೆಯ ಬಳಿಅ ಪೋಸ್ಟರ್ ಹಾಕಿದ್ದು ಸುರೇಶ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಹುಡುಗರು ಎನ್ನುತ್ತಿದ್ದಾರೆ. ಸುರೇಶ್ ಎಂಬಾತನಿಗೆ ಉರ್ದು ತಿಳಿದಿಲ್ಲ. ತಪ್ಪು ಮಾಡಿದರೆ ಶಿಕ್ಷೆಯಾಗಬೇಕು.

Tags:
error: Content is protected !!