Mysore
29
few clouds

Social Media

ಮಂಗಳವಾರ, 27 ಜನವರಿ 2026
Light
Dark

ಉದಯಗಿರಿ ಪೊಲೀಸ್‌ ಠಾಣಾ ಪ್ರಕರಣ: ಎಂಟು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಮೈಸೂರು: ನಗರದ ಉದಯಗಿರಿ ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕುಗೊಂಡಿದ್ದು ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಉದಯಗಿರಿ ಪೊಲೀಸರು ಎಫ್‌ಐಆರ್‌ ದಾಖಲಿಸಿ ಈ ಪ್ರಕರಣವನ್ನು ನಿನ್ನೆ ಸಿಸಿಬಿಗೆ ವಹಿಸಿದ ಬೆನ್ನಲ್ಲೇ ಇಂದು(ಫೆಬ್ರವರಿ.12) ಕಲ್ಲು ತೂರಾಟದ ಸಮಯದಲ್ಲಿದ್ದವರನ್ನು ಸಿಸಿ ಟಿವಿ ಫೋಟೇಜ್‌ ಆಧರಿಸಿ ಎಂಟು ಮಂದಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಪೊಲೀಸ್‌ ಬಂಧನ ಮಾಡಿದ ಆರೋಪಿಗಳ ಹೆಸರು ಈ ಕೆಳಕಂಡಂತಿದೆ.

1. ಶಾಂತಿನಗರದ ಸುಹೇಲ್‌ ಅಲಿಯಾಸ್‌ ಸೈಯದ್‌ ಸುಹೇಲ್‌ ಬಿನ್‌ ಸೈಯದ್‌.

2. ಶಾಂತಿನಗರದ ರಹೀಲ್‌ ಪಾಷಾ ಬಿನ್‌ ಕಲೀಲ್‌ ಪಾಷಾ.

3. ಗೌಸಿಯಾನಗರದ ಸೈಯದ್‌ ಸಾದಿಕ್‌ ಬಿನ್‌ ನವೀದ್‌

4. ಶಾಂತಿನಗರದ ಅಯಾನ್‌ ಬಿನ್‌ ಜಬೀವುಲ್ಲಾ.

5. ರಾಜೀವ್‌ನಗರದ ಅರ್ಬಾಜ್‌ ಷರೀಫ್‌ ಬಿನ್‌ ಇಕ್ಬಾಲ್‌ ಶರೀಷ್‌

6. ಸತ್ಯನಗರದ ಏಜಾಜ್‌ ಬಿನ್‌ ಅಬ್ದುಲ್‌ ವಾಜೀದ್‌.

7. ಗೌಸಿಯಾನಗರದ ಶೋಹೇಬ್‌ ಪಾಷಾ ಬಿನ್‌ ಮಜೀದ್‌ ಪಾಷಾ.

8. ರಾಜೀವ್‌ನಗರದ ಸಾದಿಕ್‌ ಪಾಷಾ ಅಲಿಯಾಸ್‌ ಸಾದಿಕ್‌ ಬಿನ್‌ ಖಾಲಿದ್‌ ಪಾಷಾ

Tags:
error: Content is protected !!