Mysore
17
few clouds

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಇ.ಡಿ.ಸಮನ್ಸ್‌ ವಿರುದ್ಧ ರಿಟ್‌ ಅರ್ಜಿ ಸಲ್ಲಿಕೆ: ಫೆ.20ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಧಾರವಾಡ: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವೂ ನೀಡಿದ ಸಮನ್ಸ್‌ಗೆ ಆಕ್ಷೇಪಿಸಿ ರದ್ದುಗೊಳಿಸುವಂತೆ ಸಚಿವ ಬೈರತಿ ಸುರೇಶ್‌ ಹಾಗೂ ಪಾರ್ವತಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆಯನ್ನು ಫೆಬ್ರವರಿ.20ಕ್ಕೆ ಮುಂದೂಡಲಾಗಿದೆ ಎಂದು ಹೈಕೋರ್ಟ್‌ ಆದೇಶ ಹೊರಡಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಫೆಬ್ರವರಿ.10) ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವೂ ವಿಚಾರಣೆ ನಡೆಸಿದ ಬಳಿಕ ವಾದ ಆಲಿಸಿದರು. ಪ್ರತಿವಾದಕ್ಕೆ ಇ.ಡಿ. ಪರ ವಕೀಲ ಅರವಿಂದ ಕಾಮತ್‌ ಕಾಲಾವಕಾಶ ಕೇಳಿದ್ದರಿಂದ ಈ ಅರ್ಜಿ ವಿಚಾರಣೆಯನ್ನು ಫೆ.20ರಂದು ನಡೆಸಲಾಗುವುದು ಎಂದು ಹೇಳಿದೆ.

ಇನ್ನೂ ಈ ಅರ್ಜಿ ವಿಚಾರಣೆಯನ್ನು 10 ದಿನಗಳ ಕಾಲ ಮುಂದೂಡಿರುವುದರಿಂದ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹಾಗೂ ಸಚಿವ ಬೈರತಿ ಸುರೇಶ್‌ ಅವರಿಗೆ ತಾತ್ಕಲಿಕ ರಿಲೀಫ್‌ ಸಿಕ್ಕಿದೆ.

ಸಚಿವ ಬೈರತಿ ಸುರೇಶ್‌ ಪರ ವಕೀಲರ ವಾದವೇನು?

ಇಂದು ಹೈಕೋರ್ಟ್‌ನಲ್ಲಿ ಸಚಿವ ಬೈರತಿ ಸುರೇಶ್‌ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು, ಸುರೇಶ್‌ ಅವರು ನಗರಾಭಿವೃದ್ಧಿ ಸಚಿವರಾಗಿ ಆಯ್ಕೆಯಾಗಿರುವುದು 2023ರಲ್ಲಿ. ಮುಡಾದಲ್ಲಿ ಹಗರಣ ನಡೆದಾಗ ಬೈರತಿ ಸುರೇಶ್‌ ಅವರು ಯಾವುದೇ ಹುದ್ದೆಯಲ್ಲಿರಲಿಲ್ಲ. ಅಲ್ಲದೇ 14 ನಿವೇಶನಗಳ ಹಂಚಿಕೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಹೀಗಿದ್ದರೂ ಇ.ಡಿ.ಅಧಿಕಾರಿಗಳು ಸಮನ್ಸ್‌ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪಾರ್ವತಿ ಸಿದ್ದರಾಮಯ್ಯ ಅವರ ಪರ ವಕೀಲರ ವಾದವೇನು?

ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಪರ ವಕೀಲ ಸಂದೇಶ್‌ ಚೌಟ ಅವರು, ಮುಡಾ ಹಗರಣಕ್ಕೆ ಕಾರಣವಾಗಿರುವ 50:50 ಅನುಪಾತದ ಬದಲಿ ನಿವೇಶನಗಳನ್ನು ಮುಡಾ ಮಾಜಿ ಆಯುಕ್ತ ನಟೇಶ್‌ ಕುಮಾರ್‌ ಅವರು ಆಯುಕ್ತರಾಗಿದ್ದಾಗ ನೀಡಿದ್ದಾರೆ ಎಂದು ಇ.ಡಿ. ಅಧಿಕಾರಿಗಳು ಹೇಳುತ್ತಾರೆ. ಆದರೆ ನಟೇಶ್‌ ಅವರ ವಿರುದ್ಧ ಇ.ಡಿ.ಸಂಸ್ಥೆಯೂ ನೀಡಿರುವ ಸಮನ್ಸ್‌ ಅನ್ನು ಕೋರ್ಟ್‌ ರದ್ದುಗೊಳಿಸಿದೆ ಎಂದು ಅನ್ವಯಿಸಿ ವಾದ ಮಂಡಿಸಿದರು.

Tags:
error: Content is protected !!