Mysore
30
broken clouds

Social Media

ಶನಿವಾರ, 03 ಅಕ್ಟೋಬರ್ 2026
Light
Dark

ಮಹಾ ಕುಂಭಮೇಳ: ಡಿಕೆಶಿ ದಂಪತಿ ಭಾಗಿ

ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ ಮತ್ತು ಪತ್ನಿ ಉಷಾ ಪಾಲ್ಗೊಂಡು ಪುಣ್ಯಸ್ನಾನ ಮಾಡಿದ್ದಾರೆ.

ಉತ್ತರ ಪ್ರದೇಶದ ಕೈಗಾರಿಕಾ ಸಚಿವ ನಂದಗೋಪಾಲ ಗುಪ್ತಾ ಅವರು, ಡಿಕೆ ಶಿವಕುಮಾರ್‌ ದಂಪತಿಗೆ ಭವ್ಯ ಸ್ವಾಗತ ಕೋರಿದ್ದಾರೆ.

ಕುಂಭಮೇಳದಲ್ಲಿ ಡಿಕೆಶಿ ದಂಪತಿ ಪುಣ್ಯಸ್ನಾನ ಮಾಡಿ, ನೊಣವಿಕೆರೆ ಅಜ್ಜಯ್ಯ ಅವರ ಆಶೀರ್ವಾದ ಪಡೆದರು. ನಂತರ ಆಧ್ಯಾತ್ಮದ ಕುರಿತು ಸಾಧು-ಸಂತರ ಜೊತೆಗೆ ಚರ್ಚೆ ನಡೆಸಿದರು.

ಇದಕ್ಕೂ ಮುನ್ನ ಡಿಕೆಶಿ ಅವರ ಮಗಳು ಐಶ್ವರ್ಯಾ ಕುಂಭಮೇಳದಲ್ಲಿ ಪಾಲ್ಗೊಂಡು, ಪುಣ್ಯಸ್ನಾನ ಮಾಡಿ ಸಾಧು-ಸಂತರ ಆಶೀರ್ವಾದ ಪಡೆದಿದ್ದರು.

Tags:
error: Content is protected !!