ಕೊಪ್ಪಳ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಸಹಕಾರಿ ಕ್ಷೇತ್ರ ವಿಫಲವೇ ಕಾರಣ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಪ್ರತಿದಿನ ಕಿರುಕುಳ ಹಲ್ಲೆ ನಡೆಯುತ್ತಿವೆ. ಇದಕ್ಕೆ ಸಹಕಾರಿ ಕ್ಷೇತ್ರ ಮುಗ್ಗರಿಸಿದ್ದೇ ಕಾರಣ. ಸರ್ಕಾರಗಳು ಚುನಾವಣೆ ಹಿನ್ನಲೆಯಲ್ಲಿ ಸಾಲ ಮನ್ನಾ ಮಾಡುತ್ತಾರೆ. ಸಾಲಮನ್ನಾ ಮಡಿದ ಹಣ ಸಹಕಾರಿ ಸಂಸ್ಥೆಗಳಿಗೆ ವಾಪಸ್ಸಾಗದೇ ಇರುವುದೇ ವಿಫಲಕ್ಕೆ ಕಾರಣ ಎಂದು ಹೇಳಿದರು.
ಸರ್ಕಾರಗಳು ಸಾಲಮನ್ನಾ ಮಾಡಿದ ನಂತರ ಸಹಕಾರಿ ಸಂಸ್ಥೆಗಳ ಬಲವರ್ಧನೆಗೆ ಸಹಕಾರ ನೀಡಿದ್ದರೆ, ಮೈಕ್ರೋ ಫೈನಾನ್ಸ್‌ಗಳ ಹಾವಳಿ ಬಹುಶಃ ಕಡಿಮೆಯಾಗುತ್ತಿತ್ತು ಎಂದು ತಿಳಿಸಿದರು.





